ಜೈನ್ ತೀರ್ಥಂಕರ ಮುನಿಗಳ ಶಿಲೆ ಕೆತ್ತನೆ

ರಾಯಚೂರು.ಜು.12- ನಗರದಿಂದ ತಾಲೂಕಿನ ಬೋಳಮಾನದೊಡ್ಡಿ ಗ್ರಾಮಕ್ಕೆ ತೆರಳುವ ರಸ್ತೆ ಬಲಭಾಗಕ್ಕೆ ಪ್ರಕೃತಿಯ ಸೊಬಗಿನಡಿಯಿರುವ ಬೆಟ್ಟದ ಮೇಲೆ ಹಳೆ ಕಾಲದ ಜೈನ ತೀರ್ಥಂಕರ ಮುನಿಗಳ ಶಿಲೆ ಬೆಟ್ಟದಲ್ಲಿ ಕೆತ್ತಲ್ಪಟ್ಟಿರುವುದು ಸಾರ್ವಜನಿಕರ ಪ್ರೇಕ್ಷಣೆ ಸ್ಥಳವಾಗಿ ಮಾರ್ಪಟ್ಟಿದೆ.
ಮುನಿಗಳ ಶಿಲೆ ಬೆಟ್ಟದಲ್ಲಿ ಕೆತ್ತಲ್ಪಟ್ಟಿರುವುದನ್ನು ವೀಕ್ಷಿಸಲು ಜನರು ತಂಡೋಪತಂಡ ಆಗಮಿಸುತ್ತಿದ್ದಾರೆ. ಶಿಲೆಯ ಮೇಲೆಯಲ್ಲಿರುವ ಮೇಲ್ಛಾವಣಿ ನಾಶವಾಗಿ ಶಿಥಿಲಾವಸ್ಥೆಯಲ್ಲಿರುವ ಸ್ಮಾರಕವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಐತಿಹಾಸಿಕ ಸ್ಮಾರಕಗಳನ್ನು ಗುರುತಿಸಬೇಕಾಗಿದೆ. ನಗರದಿಂದ ಬೋಳಮಾನದೊಡ್ಡಿ ತೆರಳುವ ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳಲ್ಲಿ ಐತಿಹಾಸಿಕ ಜೈನ ತೀರ್ಥಾಂಕರ ಮುನಿಗಳ ಶಿಲೆ ಕೆತ್ತಲ್ಪಟ್ಟಲಾಗಿದೆ.
ನಗರದ ಸುತ್ತಮುತ್ತಲು ಆವರಿಸಿರುವ ಐತಿಹಾಸಿಕ ಬೆಟ್ಟ-ಗುಡ್ಡಗಳ ಚರಿತ್ರೆಯ ಪ್ರತೀಕವಾಗಿದೆ. ಇಂತಹ ಸ್ಮಾರಕವನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ದೇವನಪಲ್ಲಿ ಶ್ರೀನಿವಾಸ ಅವರು ಮಾಡಿದ್ದಾರೆ. ಇವರ ಕಾರ್ಯಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತಗೊಂಡಿದೆ.

Leave a Comment