ಜೇವರ್ಗಿ: 18ಗ್ರಾಂ ಚಿನ್ನಾಭರಣ ದೋಚಿ ಪರಾರಿ

 

ಜೇವರ್ಗಿ,ಜ.25- ಪಟ್ಟಣದ ಲಕ್ಷ್ಮೀ ಚೌಕ ಬಳಿಯ ಮನೆಗಳಿಗೆ ಕನ್ನ ಹಾಕಿದ ಕಳ್ಳರು, 18 ಗ್ರಾಂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಪ್ರಕರಣ ವರದಿಯಾಗಿದೆ.

ಇದೇ ಬಡಾವಣೆಯ ಸ್ಥಾವರಮಠ ಎಂಬುವವರ ಮನೆಗೆ ಹಾಕಿದ ಬೀಗವನ್ನು ಮುರಿದು ಮನೆಯಲ್ಲಿಟ್ಟಿದ್ದ 18 ಗ್ರಾಮ ಚಿನ್ನಾಭರಣವನ್ನು ದೋಚಿದ ಕಳ್ಳರು, ಇಲ್ಲಿನ ಹಿನ್ನೆರಡು ಮನೆಗಳ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ವಿಷಯ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ದಾವಿಸಿ ಪೊಲೀಸರು, ಮತ್ತು ಶ್ವಾನದಳ, ಬೆರಳಚ್ವು ತಜ್ಞರು ಘಟನೆಯ ಮಾಹಿತಿಯನ್ನು ಸಂಗ್ರಹಿಸಿದರು..

Leave a Comment