ಜೇಟ್ಲಿ ಬಂದ ಕಾರ್ಯ ಮುಗಿಸಿ ಹಿಂದಿರುಗಿದ್ದಾರೆ : ಜಗ್ಗೇಶ್

ಬೆಂಗಳೂರು, ಆ 24 -ದೇಶ ಕಂಡ ಅಪ್ರತಿಮ ರಾಜಕಾರಣಿ, ಬಿಜೆಪಿಯ ಬ್ರೇನ್ ಎಂದೇ ಹೆಸರಾಗಿದ್ದ ಮಾಜಿ ಸಚಿವ ಅರುಣ್ ಜೇಟ್ಲಿಯವರ ನಿಧನಕ್ಕೆ ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಸಂತಾಪ ಸೂಚಿಸಿದ್ದಾರೆ

“ಅರುಣ್ ಜೇಟ್ಲಿಯವರು ಒಂದೆರಡು ಬಾರಿ ಪಕ್ಷದ ಕಚೇರಿಯಲ್ಲಿ ಹಾಗೂ ಸಾರ್ವಜನಿಕವಾಗಿ ಮಾಡಿದ ಭಾಷಣ ಕೇಳಿರುವೆ..ಅವರಿಗಿದ್ದ ರಾಜಕೀಯ ಭಾಷಣದ ಶೈಲಿಗೆ ಮಾರುಹೋಗಿದ್ದೆ..ಅದ್ಭುತ ವಾಗ್ಮಿ ರಾಜಕೀಯ ಚತುರ ಬಂದಕಾರ್ಯ ಮುಗಿಸಿ ತನ್ನ ಮನೆ ಸೇರಿದರು ಆತ್ಮಕ್ಕೆ ಚಿರಶಾಂತಿ ಸಿಗಲಿ” ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ

ನಟಿ, ಸಂಸದೆ ಸುಮಲತಾ ಅಂಬರೀಷ್, “ಅರುಣ್ ಜೇಟ್ಲಿ ವಿಧಿವಶರಾದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅವರು ಅನುಕರಣೀಯ ಸಂಸದರು, ಕಾನೂನು ತಜ್ಞರು ಮತ್ತು ಅದ್ಭುತ ವಾಗ್ಮಿಯಾಗಿದ್ದರು ಅವರ ಕುಟುಂಬಕ್ಕೆ ನನ್ನ ಸಂತಾಪವಿದೆ” ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, “ಅರುಣ್ ಜೇಟ್ಲಿಯವರ ನಿಧನದ ಸುದ್ದಿ ತಿಳಿದು ನಿಜಕ್ಕೂ ಆಘಾತವಾಯಿತು ಅವರ ಅಗಲಿಕೆಯಿಂದ ದೇಶಕ್ಕೆ ಅಪಾರ ನಷ್ಟವಾಗಿದೆ” ಎಂದು ಟ್ವಿಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ

Leave a Comment