ಜೆಸ್ಕಾಂ : 4 ಕೋಟಿ ಕಾಮಗಾರಿ – ಅಸ್ತವ್ಯಸ್ತ

ರಾಯಚೂರು.ಫೆ.20- ತಾಲೂಕಿನ ಇಡಪನೂರು ಉಪ ಕೇಂದ್ರದಿಂದ ನದಿಗಡ್ಡ ಮಲ್ಕಾಪೂರು ಹಾಗೂ ಇನ್ನಿತರ ಗ್ರಾಮಗಳ ಪಂಪ್ ಸೆಟ್‌ದಾರರ ವಿದ್ಯುತ್ ಪೂರೈಕೆ ಕಾಮಗಾರಿ ಟೆಂಡರ್ ಒಪ್ಪಂದನ್ವಯ ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳದೇ, ಗುತ್ತೇದಾರರು ಬಿಲ್ ಎತ್ತುವಳಿ ಮಾಡಿದ ಘಟನೆ ಜೆಸ್ಕಾಂ ಮೇಲಾಧಿಕಾರಿಗಳ ಕರ್ತವ್ಯ ಪ್ರಜ್ಞೆ ಪ್ರಶ್ನಿಸುವಂತೆ ಮಾಡಿದೆ.
ಇಡಪನೂರು ಗ್ರಾಮದಲ್ಲಿ 33/11 ಕೆವಿ ಉಪ ಕೇಂದ್ರದಿಂದ 11 ಕೆವಿ ಮಾರ್ಗವನ್ನು ಎಳೆಯಲಾಗಿತ್ತು. ಎಫ್ 6 ಪಂಚಮುಖಿ ಫೀಡರ ಮೇಲಿಂದ ಈ ಲೈನ್ ಅಳವಡಿಸಲಾಗಿದೆ. ಇಂಟರ್ ಮಿಡಿಯೇಟ್ ಪೋಲ್ ಹಾಕದೇ, ಕಾಮಗಾರಿ ಕೈಗೊಂಡ ಪರಿಣಾಮ ವಿದ್ಯುತ್ ಪೂರೈಕೆ ಸಂದರ್ಭದಲ್ಲಿ ಯಾವುದೇ ಅಪಘಾತ ಸಂಭವಿಸುವ ಸಾಧ್ಯತೆಗಳು ಅಲ್ಲಗಳೆಯಲಾಗುವುದು. ಈ ಕಾಮಗಾರಿಯ ಮೇಲಾಧಿಕಾರಿಗಳಾದ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಈ ಕಾಮಗಾರಿ ಪರಿಶೀಲಿಸಿದ ನಂತರ ಬಿಲ್ ಪಾವತಿಸಬೇಕಾಗಿದೆ.
ಆದರೆ, ನಿಯಮ ಬಾಹೀರವಾಗಿ ಕೈಗೊಂಡ ಕಾಮಗಾರಿ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದಿರುವುದು ಈ ಎಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಈ ಕುರಿತು ಉಪ ವಿಭಾಗದ ಶಾಖಾಧಿಕಾರಿ ಹುಲಿರಾಜ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು 11 ಕೆವಿ ಮಾರ್ಗದ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದಿರುವುದರಿಂದ ಯಾವುದಾದರೂ ಅಪಘಾತ ಸಂಭವಿಸಿದರೇ ಯಾರು ಜವಾಬ್ದಾರಿ ಎನ್ನುವುದು ಅವರ ಪ್ರಶ್ನೆಯಾಗಿದೆ.

Leave a Comment