ಜೆಡಿಯು ಅಭ್ಯರ್ಥಿ ಆಸ್ತಿ ರೂ. 4000 ಕೋಟಿ!

ಪಾಟ್ನಾ, ಮಾ. ೧೪- ನಾಮಪತ್ರ ಸಲ್ಲಿಸುವ ವೇಳೆ 4,000 ಕೋಟಿ ರೂ ಆಸ್ತಿ ಘೋಷಿಸಿಕೊಂಡಿರುವ ಮಹೇಂದ್ರ ಪ್ರಸಾದ್ ಅಲಿಯಾಸ್ ಕಿಂಗ್ ಮಹೇಂದ್ರ ಬಹುಷಃ ರಾಜ್ಯಸಭಾ ಸದಸ್ಯರಲ್ಲೇ ಅತ್ಯಂತ ಶ್ರೀಮಂತರು.

ಬಿಹಾರ ರಾಜ್ಯದಲ್ಲಿ ಜೆಡಿಯು ಪಕ್ಷದಿಂದ ರಾಜ್ಯ ಸಭೆಗೆ ನಾಮಪತ್ರ ಸಲ್ಲಿಸಿರುವ ಮಹೇಂದ್ರ ಪ್ರಸಾದ್ ಗೆದ್ದರೆ 7ನೇ ಬಾರಿಗೆ ರಾಜ್ಯಸಭಾ ಸದಸ್ಯರಾಗುತ್ತಿದ್ದಾರೆ. ಜೆಡಿಯು ಪಕ್ಷದಿಂದಲೇ ಇವರು ಮೂರನೇ ಬಾರಿಗೆ ಕಣಕ್ಕೆ ಇಳಿದಿದ್ದಾರೆ.

ತಾವು ಹೊಂದಿರುವ ಚರಾಸ್ತಿ 4,010.21 ಕೋಟಿ ಎಂದು ಘೋಷಿಸಿಕೊಂಡಿರುವ ಮಹೇಂದ್ರ ಪ್ರಸಾದ್ ಅವರ ಸ್ಥಿರಾಸ್ತಿ 29.1 ಕೋಟಿ ರೂ. ಇವರು ಎರಡು ಫಾರ್ಮಸ್ ಕ್ಯುಟಿಕಲ್ ಕಂಪನಿಗಳನ್ನು ನಡೆಸುತ್ತಿದ್ದು, ಟರ್ಮ್ ಡಿಪಾಸಿಟ್ ಆಗಿ 2,239 ಕೋಟಿ ರೂ. ಇಟ್ಟಿದ್ದಾರೆ.

ಇಷ್ಟಾದರೂ ಈ ಕೋಟ್ಯಾಧಿಪತಿ ಮೋಟಾರ್ ವಾಹನ ಹೊಂದಿಲ್ಲ. 2016-17ನೇ ಸಾಲಿನಲ್ಲಿ ತಮ್ಮ ಆದಾಯವನ್ನು 303.5 ಕೋಟಿ ರೂ. ಎಂದು ತೆರಿಗೆ ಪಾವತಿಯಲ್ಲಿ ಘೋಷಿಸಿಕೊಂಡಿದ್ದಾರೆ.

ಶ್ರೀಮಂತ ಉದ್ಯಮಿ ಕಂ ರಾಜಕಾರಣಿ ಬರೊಬ್ಬರಿ 211 ದೇಶಗಳಿಗೆ ಭೇಟಿ ನೀಡಿದ್ದಾರೆ. ಬ್ರಿಟನ್‌ಗೆ 53 ಬಾರಿ, ಅಮೆರಿಕಾಗೆ 10 ಬಾರಿ, ಅಷ್ಟೇ ಅಲ್ಲದೆ ಒಂದೇ ಮಾರ್ಗದಲ್ಲಿ 9 ಏಪ್ರಿಲ್ 2002 ರಿಂದ 8 ಏಪ್ರಿಲ್ 2003, 84 ದೇಶಗಳಿಗೆ ಪ್ರವಾಸ ಮಾಡಿದ್ದಾರೆ.

Leave a Comment