ಜೆಡಿಎಸ್ ಯುವಘಟಕ:ಪ್ರಜ್ವಲ್ ನೇಮಕಕ್ಕೆ ಮನವಿ

 

ಕಲಬುರಗಿ ಜೂ 13: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವಂತೆ ಕರ್ನಾಟಕ ಪದೇಶ ಜನತಾದಳ( ಜಾ), ಅಳಂದ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿ ದಸವಂತ ಕಣಮುಸಕರ್ ಇಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಪ್ರಜ್ವಲ್ ರೇವಣ್ಣರನ್ನು ರಾಜ್ಯ ಯುವ ಘಟಕಕ್ಕೆ ನೇಮಿಸಿದರೆ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದಂತಾಗಿ, ಪಕ್ಷದ ಸಂಘಟನೆ ಬಲಗೊಳ್ಳಲಿದೆ.ಆದ್ದರಿಂದ ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿ, ಅವರ ನೇಮಕ ಮಾಡುವಂತೆ ಪಕ್ಷದ ವರಿಷ್ಠರಾದ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರ ಸ್ವಾಮಿ ಅವರಲ್ಲಿ ಮನವಿ ಮಾಡಿಕೊಳ್ಳುವದಾಗಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ತೋಟಯ್ಯಸ್ವಾಮಿ,ಆನಂದ ದೊಡ್ಮನಿ,ಉಮೇಶ ವಾಲೀಕಾರ,ಸತೀಶ ಹೊಸ್ಮನಿ ಉಪಸ್ಥಿತರಿದ್ದರು..

Leave a Comment