ಜೆಡಿಎಸ್ ನಾಯಕರಿಗೆ ಮಹಿಳಾ ಘಟಕ ತರಾಟೆ

ಬೆಂಗಳೂರು: ಜೆಡಿಎಸ್ ಮಹಿಳಾ ಘಟಕದ ಸಭೆಯಲ್ಲಿ ಹೊರ ಜಿಲ್ಲೆಗಳ ಮಹಿಳಾ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರೇತರ ಮಹಿಳೆಯರಿಗೆ ಅವಕಾಶ ನೀಡುತ್ತಿಲ್ಲ. ಜೆಡಿಎಸ್ ಪಕ್ಷದ ಯಾವ ಸಭೆ ನಡೆದರೂ, ಬೆಂಗಳೂರಿಗರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ನೀಡಲಾಗುತ್ತಿದೆ. ನಾವು ಕಾಣಿಸುವುದಿಲ್ಲವೇ? ಅಷ್ಟು ದೂರದಿಂದ ಬರುವುದು ಏಕೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಜೆಪಿ ಭವನದಲ್ಲಿ ನಡೆದ ಮಹಿಳಾ ಪದಾಧಿಕಾರಿಗಳ ಸಭೆಯಲ್ಲಿ ಹೊರ ಜಿಲ್ಲೆಗಳ ಮಹಿಳಾ ಪದಾಧಿಕಾರಿಗಳು, ವೇದಿಕೆಯಲ್ಲಿ ಮಾತನಾಡಲು ನಮಗೂ ಅವಕಾಶ ಕೊಡಿ. ಹೊರ ಜಿಲ್ಲೆಯವರಿಗೆ ಸಾಮರ್ಥ್ಯವಿಲ್ಲವೇ? ವೇದಿಕೆಯಲ್ಲಿ ನಾವು ಮಾತನಾಡುವುದು ಯಾವಾಗ? ಎಂದು ಕಾರ್ಯಕ್ರಮದ ಸಂಘಟಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಬೆಂಗಳೂರು ಘಟಕದ ಜಿಲ್ಲಾಧ್ಯಕ್ಷ ಪ್ರಕಾಶ್ ಮಹಿಳಾ ಪದಾಧಿಕಾರಿಗಳನ್ನು ಸಮಾಧಾನಪಡಿಸಿದ್ದು, ಬಳಿಕ ಬೆಂಗಳೂರೇತರ ಮಹಿಳಾ ಪದಾಧಿಕಾರಿಗಳಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ.

Leave a Comment