ಜೆಡಿಎಸ್ ಗೆಲುವು- ಹೊನ್ನಾಳಿಯಲ್ಲಿ ವಿಜಯೋತ್ಸವ

ಹೊನ್ನಾಳಿ, ಜೂ. 13 – ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಭೋಜೇಗೌಡ ಗೆಲುವಿಗೆ ಸಂಭ್ರಮಿಸಿ ಹೊನ್ನಾಳಿ ತಾಲ್ಲೂಕಿನ ಜೆಡಿಎಸ್ ಘಟಕದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಪಕ್ಷದ ಜಿಲ್ಲಾ ಉಪಾಧ್ಯಕ್ಷೆ ವನಜಾಕ್ಷಮ್ಮ, ಕಾರ್ಯದರ್ಶಿ ರವೀಂದ್ರನಾಥ್ ಬನ್ನಿಕೋಡು, ಕೆ.ದೇವೇಂದ್ರಪ್ಪ, ಡಿ.ಜಿ.ಶಿವಮೂರ್ತಿಗೌಡ್ರು, ನರಸಿಂಹಪ್ಪ, ಸುಭಾಷ್ ಟಿ ಶಿವಪ್ಪ, ಹನಗೂಡಿ ರಮೇಶ್, ನೀಲಕಂಠಪ್ಪ ರಾಯ್ಕರ್ ಮತ್ತಿತರರಿದ್ದರು.

Leave a Comment