ಜೆಡಿಎಸ್ ಕಳ್ಳರ ಪಕ್ಷ ಅಂದಿಲ್ಲ : ಸಿಎಂ ಆರೋಪಕ್ಕೆ ಯಶ್ ಸ್ಪಷ್ಟನೆ

ಮಂಡ್ಯ.ಏ.15. ನಾವೆಂದೂ ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದಿಲ್ಲ, ಯಾರಾದರೂ ಒಬ್ಬರು ನಾನು ಆ ಬಗ್ಗೆ ಮಾತನಾಡಿದ್ದೀನಿ ಎಂದು ಸಾಕ್ಷಿ ತೋರಿಸಿದರೆ ಅವರು ಏನು ಹೇಳಿದರೂ ಕೇಳ್ತೀನಿ ಎಂದು ರಾಕಿಂಗ್ ಸ್ಟಾರ್ ಯಶ್ ಸಿಎಂ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲೆಯ ದ್ಯಾಪಸಂದ್ರ ಗ್ರಾಮದಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ ಅವರು’, ನನಗೆ ಜೆಡಿಎಸ್ ಪಕ್ಷದಲ್ಲಿ ಬಹಳಷ್ಟು ಜನ ಸ್ನೇಹಿತರಿದ್ದಾರೆ, ಹಾಗಿದ್ದರೆ ನಾನು ಅವರ ಪಕ್ಷಕ್ಕೆ ಪ್ರಚಾರಕ್ಕೆ ಹೋಗಿದ್ನಾ. ಈ ವಿಚಾರದಲ್ಲಿ ಯಾರೋ ಸಿಎಂ ಕುಮಾರಸ್ವಾಮಿಗೆ ಚಾಡಿ ಹೇಳಿ ಮಿಸ್ ಗೈಡ್ ಮಾಡಿರಬೇಕು. ನಾವೆಂದೂ ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದಿಲ್ಲ ಎಂದು ಯಶ್ ಸ್ಪಷ್ಟನೆ ನೀಡಿದ್ದಾರೆ.

Leave a Comment