ಜೆಟ್ ಏರ್ ವೇಸ್; ಸ್ವತಂತ್ರ ನಿರ್ದೇಶಕರಾದ ಅಶೋಕ್, ಶರದ್ ರಾಜೀನಾಮೆ

ನವದೆಹಲಿ,  ಜೂ 18 -ಜೆಟ್ ಏರ್ ವೇಸ್ ಆಡಳಿತ ಮಂಡಳಿ, ಕಂಪನಿಗಳ ಕಾಯ್ದೆಯ ನಿಯಮಗಳನ್ನು  ಪಾಲಿಸಲು ಒಪ್ಪದ ಹಿನ್ನೆಲೆಯಲ್ಲಿ ಕಂಪನಿಯ ಸ್ವತಂತ್ರ ನಿರ್ದೇಶಕರಾಗಿದ್ದ ಅಶೋಕ್ ಚಾವ್ಲಾ  ಹಾಗೂ ಶರದ್ ಶರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಆದರೆ, ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಯಾವುದೇ ಹೆಚ್ಚುವರಿ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಸೋಮವಾರ,  ಎಸ್ ಬಿ ಐ ನೇತೃತ್ವದ ಬ್ಯಾಂಕುಗಳ ಒಕ್ಕೂಟ, ಸಾಲದ ಶೂಲದಲ್ಲಿ ಮುಳುಗಿರುವ ವಿಮಾನ  ಸಂಸ್ಥೆಯ ವಿರುದ್ಧ ದಿವಾಳಿತನದ ನ್ಯಾಯಾಲಯದಲ್ಲಿ ದಾವೆ ಹೂಡಿ 8,500 ಕೋಟಿ ರೂ. ಸಾಲ  ಹಿಂಪಡೆಯಲು ಮುಂದಾಗಿದೆ.

ಸಾಕಷ್ಟು ಚರ್ಚೆಯ ನಂತರ, ಸಾಲ ನೀಡಿದ ಬ್ಯಾಂಕುಗಳು  ದಿವಾಳಿತನದ ಬ್ಯಾಂಕ್ ಮೊರೆ ಹೋಗಿ ಸಾಲ ಮರುಪಾವತಿಗೆ ಒತ್ತಾಯಿಸಲು ನಿರ್ಧರಿಸಲಾಗಿದೆ  ಎಂದು ಎಸ್ ಬಿ ಐ ಪ್ರಕಟಣೆಯಲ್ಲಿ ತಿಳಿಸಿದೆ. ಜೂನ್ 20ರಂದು ಅರ್ಜಿ ಸಲ್ಲಿಕೆಯಾಗುವ  ಸಾಧ್ಯತೆಯಿದೆ.

ಜೆಟ್ ಏರ್ ವೇಸ್ ಸಂಸ್ಥೆ ಹಲವು ಬ್ಯಾಂಕುಗಳಿಗೆ 8,500 ಕೋಟಿಯಷ್ಟು  ಸಾಲ ಮರುಪಾವತಿ ಮಾಡಬೇಕಿದೆ. ಸಂಸ್ಥೆ ಕಳೆದ ಏಪ್ರಿಲ್ 17ರಂದು ಹಣದ ಕೊರತೆ ಎದುರಾದ  ಹಿನ್ನೆಲೆಯಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತ್ತು.

 

Leave a Comment