ಜೆಎನ್ ಯು ಹಿಂಸಾಚಾರ : ವಾಟ್ಸಾಪ್ ಫೋನ್ ಜಪ್ತಿಗೆ ಹೈಕೋರ್ಟ್ ಆದೇಶ

ನವದೆಹಲಿ.ಜ.೧೪. ಜೆಎನ್‌ಯು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ವಾಟ್ಸಾಪ್‌ ಗ್ರೂಪ್‌ಗಳ ಮೂಲಕ ಸಂಯೋಜಿಸಲಾಗಿದೆ ಎಂಬ ಆರೋಪದ ಮೇಲೆ ಈ ಗುಂಪಿನ ಸದಸ್ಯರ ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡುವಂತೆ ದೆಹಲಿ ಹೈಕೋರ್ಟ್‌ ಪೊಲೀಸರಿಗೆ ಸೂಚನೆ ನೀಡಿದೆ.
ಬಳಕೆದಾರರ ಫೋನ್‌ಗಳಿಂದ ಸಂದೇಶಗಳನ್ನು ಪುನಃ ಪಡೆದುಕೊಳ್ಳಬಹುದು ಎಂದು ತಿಳಿದ ಬಳಿಕ ದೆಹಲಿ ಹೈಕೋರ್ಟ್‌ ಈ ಆದೇಶ ನೀಡಿದೆ. ಇಷ್ಟೇ ಅಲ್ಲದೆ ‘ಫ್ರೆಂಡ್ಸ್‌ ಆಫ್‌ ಆರ್‌ಎಸ್‌ಎಸ್‌’ ಮತ್ತು ‘ಯುನಿಟಿ ಎಗೈನ್ಸ್ಟ್‌ ಲೆಫ್ಟ್‌’ ಗುಂಪಿನ ಎಲ್ಲಾ ಸದಸ್ಯರಿಗೆ ಸಮನ್ಸ್‌ ನೀಡುವಂತೆ ಹೈಕೋರ್ಟ್‌ ಪೊಲೀಸರಿಗೆ ನಿರ್ದೇಶನ ನೀಡಿದೆ.
ಜೆಎನ್‌ಯುನ ಪ್ರಧ್ಯಾಪಕರು ಸಿಸಿಟಿವಿ ದೃಶ್ಯಾವಳಿಗಳು, ವಾಟ್ಸಾಪ್‌ ಸಂವಾದಗಳು ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂರಕ್ಷಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌ ವಾಟ್ಸಾಪ್‌, ಗೂಗಲ್‌ಗೆ ಮಾಹಿತಿಯನ್ನು ಜೋಪಾನ ಮಾಡುವಂತೆ ಮತ್ತು ದೆಹಲಿ ಪೊಲೀಸರು ಕೇಳುವ ಮಾಹಿತಿಯನ್ನು ನೀಡುವಂತೆ ಹೇಳಿದೆ.

Leave a Comment