ಜೂ.15ಕ್ಕೆ ಅಂಬೇಡ್ಕರ್ ಸಂಘದ ಮಹಾ ಸಭೆ

ಬಳ್ಳಾರಿ, ಮೇ.25: ಬಳ್ಳಾರಿ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಆಡಳಿತ ಮಂಡಳಿಯ ಮಹಾ ಸಭೆಯನ್ನು ಜೂ.15ರಂದು ಬೆಳಿಗ್ಗೆ 10 ಗಂಟೆಗೆ ಸಂಘದ ಕಛೇರಿಯಲ್ಲಿ ಕರೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಚಿದಾನಂದಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದಿನ ಸಭೆಯಲ್ಲಿ ಎಂ.ಜಿ.ಗೌಡರಿಂದ ಬರಬೇಕಾಗಿರುವ ಬಾಕಿ ಹಣ ಪಾವತಿ ಮಾಡದಿರುವ ಬಗ್ಗೆ ಮತ್ತು ಕೊರೊನಾ ಸೋಂಕು ಇರುವುದರಿಂದ ಮಳಿಗೆಗಳ ಬಾಡಿಗೆಗಳು ಸಂಘಕ್ಕೆ ಪಾವತಿ ಮಾಡದಿರುವ ಬಗ್ಗೆ, ಏ.04, 2019 ರಿಂದ ಏ.30, 2020ರ ವರೆಗೆ ಲೆಕ್ಕ ಪತ್ರಗಳನ್ನು ಸಭೆಗೆ ಒಪ್ಪಿಸುವ ಬಗ್ಗೆ ಮತ್ತು ಸಂಘಕ್ಕೆ ನೂತನವಾಗಿ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಸೇರಿದಂತೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಅಂದಿನ ಸಭೆಗೆ ಸಂಘದ ಆಜೀವ ಸದಸ್ಯರು ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ತಪ್ಪದೇ ಹಾಜರಾಗಬೇಕು ಎಂದು ಚಿದಾನಂದಪ್ಪ ತಿಳಿಸಿದ್ದಾರೆ.

Share

Leave a Comment