ಜೂ: ಶೂಟರ್‌ಗಳ ಗುರಿಗೆ ೨ ಚಿನ್ನ ವಿಶ್ವ ಚಾಂಪಿಯನ್‌ಷಿಪ್

ಚಾಂಗ್ವಾನ್, ಸೆ ೭- ದಕ್ಷಿಣ ಕೊರಿಯಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಜೂನಿಯರ್ ಶೂಟರ್‌ಗಳು ಭಾರತಕ್ಕೆ ಮತ್ತೆ ಎರಡು ಚಿನ್ನದ ಪದಕಗಳನ್ನು ಗೆದ್ದುಕೊಟ್ಟು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಪುರುಷರ ೧೦ ಮೀ. ಏರ್ ರೈಫಲ್‌ನಲ್ಲಿ ಭಾರತದ ಜೂನಿಯರ್ ಶೂಟರ್ ಹೃದಯ್ ಹಜಾರಿಕಾ ಅವರು ಚಿನ್ನ ಗೆದ್ದರೆ ಮಹಿಳೆಯ ತಂಡ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು.

ಹೃದಯ್ ಹಜಾರಿಕಾ ಅವರು ಫೈನಲ್‌ನಲ್ಲಿ ೬೨೭.೩ ಅಂಕ ಗಳಿಸುವ ಮೂಲಕ ಇರಾನಿನ ಮೊಹಮ್ಮದ್ ಆರಿಫ್ ನೆಕೋನಾಮ್ ಅವರನ್ನು ಪರಾಭವಗೊಳಿಸಿದರು. ಭಾರತದ ಮಹಿಳೆಯರ ತಂಡದ ಇ. ವಲರಿವನ್ (೬೩೧), ಶ್ರೇಯಾ ಅಗರ್ವಾಲ್ (೬೨೮.೫) ಮತ್ತು ಮಾನಿನಿ ಕೌಶಿಕ್ (೬೨೧.೨) ಅತ್ಯುತ್ತಮ ನಿರ್ವಹಣೆ ತೋರಿ ವಿಶ್ವ ದಾಖಲೆ ಸ್ಥಾಪಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

Leave a Comment