ಜೂನ್ 5 ರಿಂದ ವಿಧಾನಸಭಾ ಅಧಿವೇಶನ

ಬೆಂಗಳೂರು, ಮೇ ೧೭ – ರಾಜ್ಯ ವಿಧಾನ ಮಂಡಲದ ಅಧಿವೇಶನ ಬರುವ ಜೂನ್ 5 ರಿಂದ 16ರ ವರೆಗೂ ಬೆಂಗಳೂರಿನಲ್ಲಿ ನಡೆಸಲು ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಬಜೆಟ್‌ನ ಮುಂದುವರೆದ ಅಧಿವೇಶನ ಇದಾಗಿದ್ದು, ಬರುವ ಜೂನ್ 5 ರಿಂದ 16ರ ವರೆಗೂ 2 ವಾರಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆಯಲಿದೆ ಎಂದು ಸಂಪುಟ ಸಭೆಯ ನಂತರ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

ಈ ಅಧಿವೇಶನದಲ್ಲಿ ರಾಜ್ಯದ ಪೂರ್ಣ ಪ್ರಮಾಣದ ಬಜೆಟ್‌‌ಗೆ ಅಂಗೀಕಾರ, ವಿವಿಧ ಇಲಾಖೆಗಳ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ.

Leave a Comment