ಜೂಜಾಟ: 9 ಮಂದಿ ಬಂಧನ, 2.13 ಲಕ್ಷ ರೂ. ವಶ

ತುಮಕೂರು, ಫೆ. ೧೮- ತೋಟವೊಂದರ ಬಳಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಹುಳಿಯಾರು ಪೊಲೀಸರು ದಾಳಿ ನಡೆಸಿ 9 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟಿದ್ದ 2.13 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಹುಳಿಯಾರು ಹೋಬಳಿಯ ಕುರಿಹಟ್ಟಿ ಗ್ರಾಮದ ಪ್ರಕಾಶ್ ಎಂಬುವರ ತೋಟದ ಬಳಿ ಜೂಜಾಟ ನಡೆಯುತ್ತಿದೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹುಳಿಯಾರು ಪಿಎಸ್ಐ ರಮೇಶ್, ಎಎಸ್ಐ ಶಿವಯ್ಯ ಮತ್ತು ಸಿಬ್ಬಂದಿಗಳಾದ ಶಂಕರಪ್ಪ, ಶಂಕರ್, ಮಲ್ಲಿಕಾರ್ಜುನ, ಚೇತನ್, ನಾಗರಾಜು, ಚೇತನ್‌ರವರು ದಾಳಿ ನಡೆಸಿ ಜೂಜಾಟದಲ್ಲಿ ನಿರತರಾಗಿದ್ದ 9 ಮಂದಿಯನ್ನು ಬಂಧಿಸಿ, ಪಣಕ್ಕಿಟ್ಟಿದ್ದ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹುಳಿಯಾರು ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment