ಜೂಜಾಟ: 17 ಜನರ ಬಂಧನ, 61,830 ರೂ.ಜಪ್ತಿ

 

ಕಲಬುರಗಿ,ಜು.17-ನಗರದ ಸಿದ್ದೇಶ್ವರ ಕಾಲೋನಿ ಮತ್ತು ಸಿದ್ದಾರೂಢ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ 17 ಜನ ಜೂಜುಕೋರರನ್ನು ಬಂಧಿಸಿರುವ ವಿಶ್ವವಿದ್ಯಾಲಯ ಠಾಣೆ ಪೊಲೀಸರು 61,830 ರೂ.ನಗದು ಜಪ್ತಿ ಮಾಡಿದ್ದಾರೆ.

ಸಿದ್ದೇಶ್ವರ ಕಾಲೋನಿಯಲ್ಲಿ ಆತ್ಮಾನಂದ ಅಮೃತ ಶಿವಕೇರಿ, ರಾಹುಲ್ ದೊಂಡಿರಾಮ ಕಂಳಬೆ, ಕುಮಾರ ಅಂಬಣ್ಣ ಕಟ್ಟಿಮನಿ, ಸುಂದರ ರುಕ್ಕಪ್ಪ ಯಾದಗಿರಿ, ಶ್ರೀಕಾಂತ ನರಸಪ್ಪ ತಾಂಡೂರಕರ್, ಅಮರ ಚಂದ್ರಕಾಂತ ತಾಂದಳೆ ಮತ್ತು ನಾಗೇಶ ರಮೇಶ ಟಿಕಾರೆ ಎಂಬುವರನ್ನು ಬಂಧಿಸಿ 45,630 ರೂ. ನಗದು, ಸಿದ್ಧಾರೂಢ ಮಠದ ಹತ್ತಿರ ಪ್ರಭಯ್ಯಾ ಸ್ವಾಮಿ ಬಸವಣ್ಣಯ್ಯಾ ಸ್ವಾಮಿ ಯಕ್ಕಂಚಿ, ಸಂಗಪ್ಪ ಬಸವರಾಜ ಜೇರಟಗಿ, ಸಂತೋಷ ಶಂಕ್ರೆಪ್ಪ ಸಜ್ಜನ, ಚೆನ್ನಬಸಪ್ಪಾ ಸಿದ್ರಾಮಪ್ಪಾ ಹೂಗಾರ, ಅವಿನಾಶ ಸಂಗ್ರಾಮ ಗಾಜುಲ, ಅರುಣಕುಮಾರ ಶರಣಪ್ಪಾ ಮಠಪತಿ, ಅಶೋಕ ಈರಣ್ಣಗೌಡ ಪಾಟೀಲ, ಬಸವರಾಜ ಮಹಾದೇವ ಶ್ರೀಗಿರಿ, ರಾಜು ಬಸವರಾಜ ಸಜ್ಜನ್, ಮತ್ತು ಸಿದ್ದು ಬಸವರಾಜ ನೆಲೋಗಿ ಎಂಬುವವರನ್ನು ಬಂಧಿಸಿ 16,200 ರೂ. ಜಪ್ತಿ ಮಾಡಿದ್ದಾರೆ.

ಸಿ ಉಪ ವಿಭಾಗದ ಡಿಎಸ್ಪಿ ಮತ್ತು ಎಸಿಪಿ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ವಾಹಿದ್ ಕೊತ್ವಾಲ್, ಸಿಬ್ಬಂದಿಗಳಾದ ಹಣಮಂತ, ಈರಣ್ಣಾ, ಪ್ರಭಾಕರ, ಮಲ್ಲಿಕಾರ್ಜುನ, ಭಾಗಪ್ಪ, ವಿಶ್ವನಾಥ, ಗುರುನಾಥ ಅವರು ದಾಳಿ ನಡೆಸಿ ಜೂಜುರೋಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment