ಜೂಜಾಟ: ಮೂವರ ಬಂಧನ

ಮಧುಗಿರಿ, ಫೆ. ೮- ಜೂಜಾಟದಲ್ಲಿ ತೊಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿ ಪಣಕ್ಕಿಟ್ಟಿದ್ದ 8650 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಕೊಡಿಗೇನಹಳ್ಳಿ ಐ.ಡಿ.ಹಳ್ಳಿ ಹೋಬಳಿ ವಿಠಲಾಪುರ ಗ್ರಾಮದ ಜಯಮಂಗಲಿ ನಂದಿಯಲ್ಲಿ ಜೂಜಾಟದಲ್ಲಿ ತೊಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಮೋಹನ್‌ಕುಮಾರ್ ನೇತೃತ್ವದ ತಂಡ ಆಂಧ್ರ ಪ್ರದೇಶ ಮೂಲದ ಹಿಂದೂಪುರ ಪಟ್ಟಣದ ಹನುಮಂತರೆಡ್ಡಿ, ಅನಿಲ್‌, ನಾಗೇಂದ್ರ ಎಂಬುವರನ್ನು ಬಂಧಿಸಿದ್ದಾರೆ.

ಈ ಸಂಬಂಧ ಕೊಡಿಗೇನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment