ಜು.7 ಕ್ಕೆ ಸಾಹಿತಿ ಟಿ. ಗಿರಿಜಾ ಸಂಸ್ಮರಣೆ

ದಾವಣಗೆರೆ,ಜು.4- ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆ ಹಾಗೂ ವನಿತಾ ಸಾಹಿತ್ಯ ವೇದಿಕೆ, ವನಿತಾ ಸಮಾಜ,
ದಾವಣಗೆರೆ ಇವರ ಸಹಯೋಗದಲ್ಲಿ ದತ್ತಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಹಿರಿಯ ಸಾಹಿತಿ ಟಿ. ಗಿರಿಜಾರವರ ಸಂಸ್ಮರಣೆ ಕಾರ್ಯಕ್ರಮ ಜು.7 ರ ಬೆಳಿಗ್ಗೆ 10.30ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಪರಿಷತ್‍ನ ಗೌರವ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ನೆರವೇರಿಸಲಿದ್ದಾರೆ. .ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ
ವಹಿಸಲಿದ್ದು, ಪ್ರಾಸ್ತಾವಿಕವಾಗಿ ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಎಸ್.ಎಂ.ಮಲ್ಲಮ್ಮ ಮಾತನಾಡಲಿದ್ದಾರೆ. ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಇ.ಎಂ. ಮಂಜುನಾಥ್ ತಿಳಿಸಿದ್ದಾರೆ. “ಹಿರಿಯ ಸಾಹಿತಿ ಟಿ. ಗಿರಿಜಾರವರ ಕೃತಿ ಅವಲೋಕನ’’ ವಿಷಯ ಕುರಿತು ದಾವಣಗೆರೆ ಸಾಹಿತಿಗಂಗಾಧರ ಬಿ.ಎಲ್. ನಿಟ್ಟೂರ್ ಇವರು ಹಾಗೂ “ಮಹಿಳಾ ಸಾಹಿತ್ಯ – ಅಭಿವ್ಯಕ್ತಿ ಸ್ವಾತಂತ್ರ್ಯ’’ ವಿಷಯ ಕುರಿತು ಚಿತ್ರದುರ್ಗದ ಸಾಹಿತಿಗಳು ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಯಶೋಧಮ್ಮ ಬಿ. ರಾಜಶೇಖರಪ್ಪ ಇವರು ಉಪನ್ಯಾಸ ನೀಡಲಿದ್ದಾರೆ. ಸಂಗೀತ ಮತ್ತು ನೃತ್ಯ ಕಾರ್ಯಕ್ರಮವನ್ನು ಶ್ರೀಮತಿ ರುದ್ರಾಕ್ಷಿಬಾಯಿ ಮತ್ತು ತಂಡದವರು ನಡೆಸಿಕೊಡಲಿದ್ದಾರೆ. ಲೇಖಕಿ ಶ್ರೀಮತಿ ಟಿ.ಎಸ್.ಶೈಲಜಾ ಉಪಸ್ಥಿತರಿರುವರು. ಕನ್ನಡಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹಾಗೂ ವನಿತಾ ಸಾಹಿತ್ಯ ವೇದಿಕೆ ಸರ್ವಸದಸ್ಯರು ತಪ್ಪದೇ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವನಿತಾ ಸಾಹಿತ್ಯ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸತ್ಯಭಾಮ ಮಂಜುನಾಥ್ ವಿನಂತಿಸಿದ್ದಾರೆ.

Leave a Comment