ಜು. 20 ರಂದು ದೈವಜ್ಞ ಪುರಸ್ಕಾರ

ದಾವಣಗೆರೆ, ಜು. 18 – ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಜು.20 ರಂದು ಸಂಜೆ 5-30 ಕ್ಕೆ ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ, 22ನೇ ದ್ವಿದಶಕೋತ್ತರ ವರ್ಷಾಚರಣೆ ಹಾಗೂ ದೈವಜ್ಞ ಪುರಸ್ಕಾರ, ದೈವಜ್ಞ ಪ್ರೋತ್ಸಾಹ ಕಾರ್ಯಕ್ರಮ, ದೈವಜ್ಞ ಶ್ರೇಷ್ಟ ಬಿರುದಿನೊಂದಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿಯ ಕಾರ್ಯಕಾರಿಣಿ ನಿರ್ದೇಶಕ ವಾಸುದೇವ್ ರಾಯ್ಕರ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಸಂಸದ ಜಿ.ಎಂ.ಸಿದ್ದೇಶ್ವರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಎಸ್.ಎ.ರವೀಂದ್ರನಾಥ್ ಆಗಮಿಸಲಿದ್ದಾರೆ. ಸೊಸೈಟಿಯ ಅಧ್ಯಕ್ಷ ಪ್ರಶಾಂತ್ ವಿ ವರ್ಣೆಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ರೇವಣ್ಣ, ಮದುಸೂದನ್ ಜೆ ಕುರ್ಡೆಕರ್, ಉದಯ್ ಕುರ್ಡೆಕರ್ ಮತ್ತಿತರರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ. 75 ರಷ್ಟು ಮತ್ತು ಸ್ನಾತಕೋತ್ತರ ಪದವಿಯಲ್ಲಿ ಡಿಸ್ಟಿಕ್ಷನ್ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಕ್ಯಾಶ್ ಬಾಂಡ್ ನೊಂದಿಗೆ ಪುರಸ್ಕಾರಿಸಲಾಗುವುದು. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ನೋಟ್ ಬುಕ್ ಮತ್ತು ಬ್ಯಾಗ್ ವಿತರಣೆ, ವಿವಿಧ ರಂಗಗಳಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪುರಸ್ಕಾರ ಪಡೆದವರು ಸಹ ತಮ್ಮ ವಿವರಗಳೊಂದಿಗೆ ಜು. 19 ರೊಳಗಾಗಿ ಎಲ್ಲಾ ದಾಖಲಾತಿಗಳನ್ನು ಸೊಸೈಟಿ ಅಥವಾ ಸೊಸೈಟಿಯ ನಿರ್ದೇಶಕರಲ್ಲಿ ತಲುಪಿಸಬೇಕೆಂದು ಮನವಿ ಮಾಡಿದರು. ಪ್ರಶಾಂತ್ ವಿ ವರ್ಣೆಕರ್, ಮಂಜುನಾಥ ವಿ ಕುಡತರಕರ್, ಸುಮಂಗಲ ಪಿ ಭಟ್, ಸತೀಶ್ ಎಸ್ ಸಾನು, ದೀಪಕ್ ಎನ್ ಶೇಟ್ ಇದ್ದರು.

Leave a Comment