ಜು.೧೩- ರಾಷ್ಟ್ರಪ್ರಶಸ್ತಿ ವಿಜೇತ ಪಡ್ಡಾಯಿ ಬಿಡುಗಡೆ

ಮಂಗಳೂರು, ಜು.೧೧- ರಾಷ್ಟ್ರಮಟ್ಟದಲ್ಲಿ ಚಲನಚಿತ್ರ ಪ್ರಶಸ್ತಿ ಪಡೆದ ತುಳು ಭಾಷೆಯ ೧೦೦ ನಿಮಿಷ ಸಮಯದ ಚಲನಚಿತ್ರ ‘ಪಡ್ಡಾಯಿ’ ಜುಲೈ ೧೩ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ೧೦ ಚಲನನಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ ನಿರ್ದೇಶಕ ಅಭಯ ಸಿಂಹ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಸಿದ್ಧ ಆಂಗ್ಲ ಭಾಷಾ ನಾಟಕಕಾರ ಶೇಕ್ಸ್‌ಪಿಯರ್ ರಚಿಸಿದ ಮ್ಯಾಕ್‌ಬೆತ್ ನಾಟಕದ ಕಥೆಯನ್ನಾಧರಿಸಿದ ತುಳು ಭಾಷೆಯಲ್ಲಿ ಅಳವಡಿಸಲಾದ ಚಲನಚಿತ್ರ ಪಡ್ಡಾಯಿ ಮಲ್ಪೆಯ ಕಡಲ ತೀರದ ಮೀನುಗಾರರ ಬದುಕಿನ ಸುತ್ತ ನಡೆಯುವ ಕಥೆಯಾಗಿದೆ. ಕರಾವಳಿಯ ಬದುಕಿನ ಸಾಹಸಮಯ ಸನ್ನಿವೇಶದ ಚಿತ್ರಣದೊಂದಿದೆಗೆ ಕಥೆ ಪ್ರಾದೇಶಿಕ ಸೊಗಡನ್ನು ಉಳಿಸಿಕೊಂಡು ಸಮರ್ಥ ಸಂಗೀತ ಸಂಯೋಜನೆಯೊಂದಿಗೆ ಪಡ್ಡಾಯಿ ನಿರ್ಮಾಣಗೊಂಡಿದೆ ಎಂದು ಅಭಯ ಸಿಂಹ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ನಿತ್ಯಾನಂದ ಪೈ, ಛಾಯಾಗ್ರಾಹಕ ವಿಷ್ಣುಪ್ರಸಾದ್, ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್, ಧ್ವನಿ ನಿರ್ವಹಣೆ ಮಾಡಿದ ಜೇಮಿ.ಡಿ ಸಿಲ್ವ, ನಿರ್ಮಾಣ ನಿರ್ವಹಣೆ ಮಾಡಿದ ರಾಜೇಶ್ ಕುಡ್ಲ, ಕಲಾವಿದರಾದ ಮೋಹನ್ ಶೇಣಿ, ಬಿಂದು ರಕ್ಷಿದಿ, ಚಂದ್ರಹಾಸ ಉಳ್ಳಾಲ, ರವಿಭಟ್, ಗೋಪಿನಾಥ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

Leave a Comment