ಜುಲೈ 15 ರಂದು ಚಂದ್ರಯಾನ-2 ಉಡ್ಡಯನ-ಇಸ್ರೋ ಅಧ್ಯಕ್ಷ ಡಾ.ಕೆ.ಸಿವನ್

ಬೆಂಗಳೂರು, ಜೂನ್ 12 – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋದ ಮಹತ್ವಾಕಾಂಕ್ಷೆಯ ಹಾಗೂ ಭಾರತದ ಮೂರನೆಯ ಅಂತರ ಗ್ರಹ ಯೋಜನೆ, ಚಂದ್ರಯಾನ-2 ಉಡ್ಡಯನಕ್ಕೆ ಮುಹೂರ್ತ ನಿಗದಿಯಾಗಿದೆ.
ಜುಲೈ 15ರಂದು ಬೆಳಗ್ಗೆ 2 ಗಂಟೆ 51 ನಿಮಿಷಕ್ಕೆ ಚಂದ್ರಯಾನ -2 ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ನಭೋಮಂಡಲದತ್ತ ಪ್ರಯಾಣ ಆರಂಭಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಕೆ. ಸಿವನ್ ಬುಧವಾರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದು ಆರ್ಬಿಟರ್, ಲ್ಯಾಂಡರ್ ಹಾಗೂ ಲ್ಯಾಂಡ್ ರೋವರ್ ಗಳನ್ನು ಒಳಗೊಂಡಿದ್ದು, ಸೆಪ್ಟೆಂಬರ್ 6 ಅಥವಾ 7ರಂದು ರೋವರ್ ಚಂದ್ರನ ಮೇಲ್ಮೈ ಸ್ವರ್ಶಿಸಲಿದೆ. ನಂತರ, ರೋವರ್ ಚಂದ್ರದ ಮೇಲ್ಮೈ ಹಾಗೂ ಪರಿಸರದ ಅಧ್ಯಯನ ನಡೆಸಿ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನಿಸಲಿದೆ. ಚಂದ್ರನ ಮೇಲಿರುವ ಒಂದು ದಿನದ ಅವಧಿ ಭೂಮಿಯ 13 ದಿನಗಳಿಗೆ ಸಮಾನವಾಗಿರುತ್ತದೆ ಎಂದು ಮಾಹಿತಿ ನೀಡಿದರು.

Leave a Comment