ಜುಗಾರಿ: ೧೩ ಸೆರೆ

ಉಡುಪಿ, ಫೆ.೧೨- ಮಲ್ಪೆಬಂದರಿನ ಹಳೆ ಜೆಟ್ಟಿಯ ಹತ್ತಿರ ನಿನ್ನೆ ಮಧ್ಯಾಹ್ನ ಇಸ್ಪೀಟ್ ಜುಗಾರಿ ಆಡುತ್ತಿದ್ದ ೧೩ ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಂತೋಷ, ದಯಾನಂದ ಕೋಟ್ಯಾನ್, ಸುಧಾ, ನವೀನ್ ಅಮೀನ್, ಕುಮಾರೇಶ, ಮಧು ಬಂಗೇರ, ದೇವೇಂದ್ರ, ಕೃಷ್ಣ, ಸತೀಶ, ಪ್ರವೀತ್, ದಯಾನಂದ ಕೋಟ್ಯಾನ್, ದನಂಜಯ, ಸುರೇಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ೨೦,೧೦೦ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment