ಜೀ ಕನ್ನಡದಲ್ಲಿ ತ್ರಿವಳಿ ರಿಯಾಲಿಟಿ ಶೋಗಳ ಸಂಭ್ರಮ

 

ಜೀಕನ್ನಡ ವಿಭಿನ್ನ ಕಾರ್ಯಕ್ರಮಗಳ ಮೂಲಕವೇ ಕನ್ನಡಿಗರ ಮನಗೆದ್ದಿದೆ, ಸದ್ಯ ಲಾಕ್‌ ಡೌನ್‌ ಸಂದರ್ಭದಲ್ಲೂ ತನ್ನ ಮನೋರಂಜನೆ ಮುಂದುವರೆಸಿದೆ, ಜೀ ಕನ್ನಡ ಹಲವು ಬ್ಲಾಕ್ಬಸ್ಟರ್ ಕಾರ್ಯಕ್ರಮಗಳಾದ ವೀಕೆಂಡ್ ವಿಥ್ ರಮೇಶ್, ಸ ರೆ ಗ ಮ ಪ, ಮತ್ತು ಡ್ರಾಮಾ ಜೂನಿಯರ್ಸ್ ಮುಂತಾದವುಗಳನ್ನು ಸೃಷ್ಟಿಸಿದ್ದು ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುತ್ತವೆ.
ಜೀ ಕನ್ನಡ “ಬಯಸಿದ ಬಾಗಿಲು ತೆಗೆಯೋಣ” ಎಂಬ ಘೋಷವಾಕ್ಯದ ಮೂಲಕ ವಿಶ್ವದಾದ್ಯಂತ ಕನ್ನಡಿಗರ ಮನೆ ಮನೆಗೆ ತಲುಪಿದ ಕುಟುಂಬದ ಸಮಗ್ರ ಮನರಂಜನೆಯ ಕನ್ನಡ ವಾಹಿನಿಯಾಗಿದೆ. ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿಥ್ ರಮೇಶ್ ಇತ್ಯಾದಿ ಅಸಂಖ್ಯ ರಿಯಾಲಿಟಿ ಶೋಗಳು ಜೀ ಕನ್ನಡ ವಾಹಿನಿಯನ್ನು ಕನ್ನಡಿಗರ ಮನೆ ಮನೆ ಮಾತಾಗಿಸಿವೆ.

ಕನ್ನಡದ ಮುಂಚೂಣಿಯ ಮನರಂಜನೆಯ ವಾಹಿನಿ ಜೀ ಕನ್ನಡ ಈ ವಾರಾಂತ್ಯಕ್ಕೆ ಮೂರು ಮಹತ್ತರ ಕಾರ್ಯಕ್ರಮಗಳ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗಿದೆ.

ಈ ಶನಿವಾರ ಮತ್ತು ಭಾನುವಾರ ರಾತ್ರಿ 9.00 ಗಂಟೆಗೆ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿರುವ ನಿಮ್ಮ ನೆಚ್ಚಿನ ತಾರೆಯರ `ಲಾಕ್ ಡೌನ್ ಡೈರೀಸ್’ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಿದ್ಧಪಡಿಸಲಾಗಿದೆ. ಜನಪ್ರಿಯ ತಾರೆಯರು ತಮ್ಮ ಲಾಕ್ ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ನೀಡುತ್ತದೆ.

ಸರಿಗಮಪ ಕಾರ್ಯಕ್ರಮದ ಜನಪ್ರಿಯ ನಿರೂಪಕಿ ಅನುಶ್ರೀ ಅವರಿಂದ ವಿನೂತನ ಕಾರ್ಯಕ್ರಮ,`ಕಾಫಿ ವಿಥ್ ಅನು’ ಜೀ ಕನ್ನಡ ಮತ್ತೊಂದು ಆಕರ್ಷಣೆಯಾಗಿದ್ದು ಅನುಶ್ರೀ ಅವರು ಖ್ಯಾತನಾಮರೊಂದಿಗೆ ತರಲೆ, ಹಾಸ್ಯ, ಮಾತುಕತೆ ಮಾಡಿ ನಿಮಗೆ ನಿಮ್ಮ ತಾರೆಯರ ಕಾಣದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳು ಕನ್ನಡ ಕಿರುತೆರೆಯಲ್ಲಿಯೇ ವಿನೂತನ ಪರಿಕಲ್ಪನೆಯಾಗಿದ್ದು ವೀಕ್ಷಕರನ್ನು ರಂಜಿಸಲಿವೆ. ಈ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಅನುಶ್ರೀ ಅವರೊಂದಿಗೆ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ‘ಕಾಫಿ ವಿಥ್ ಅನು’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಜೀ ಟಿ.ವಿ.ಯಲ್ಲಿ ಸ ರೆ ಗ ಮ ಪ ಕಾರ್ಯಕ್ರಮದ 25ನೇ ಯಶಸ್ವಿ ವರ್ಷಗಳ ಸಂಭ್ರಮಾಚರಣೆಗೆ ಮೇ 23ರಂದು ಶನಿವಾರ ಸಂಜೆ 4.30ಕ್ಕೆ 2.5-ಗಂಟೆಗಳ ಲೈವಥಾನ್ ಡಿಜಿಟಲ್ ಮ್ಯೂಸಿಕ್ ಕನ್ಸರ್ಟ್ ಆಯೋಜಿಸಿದೆ. ಈ ನೆಟ್ ವರ್ಕ್ ಸಂಗೀತವನ್ನು ಜನರನ್ನು ಒಗ್ಗೂಡಿಸಲು ಮತ್ತು ಈ ಸಾಂಕ್ರಾಮಿಕದ ಸಮಯದಲ್ಲಿ ಮನೆಯಲ್ಲಿಯೇ ರಂಜಿಸಲು ಆಯೋಜಿಸಿದೆ. ಭಾನುವಾರ ಸಂಜೆ 7.00 ಗಂಟೆಗೆ `ಒಂದೇ ದೇಶ, ಒಂದೇ ರಾಗ’ಈ ಸಂಗೀತ ಕಾರ್ಯಕ್ರಮದ ಪ್ರಸಾರ  ವೀಕ್ಷಕರನ್ನು ರಂಜಿಸಲಿದೆ.

ಲಾಕ್ ಡೌನ್ 4.0 ಕಾಲದಲ್ಲಿ ಈ ಡಿಜಿಟಲ್ ಕನ್ಸರ್ಟ್ ಭಾರತವನ್ನು ಕೋವಿಡ್-19ರ ವಿರುದ್ಧ ಹೋರಾಡಲು ಒಗ್ಗೂಡಿಸಲು ಸ್ಫೂರ್ತಿ ತುಂಬಲಿದೆ. ಈ ಸಂಗೀತ ಕಾರ್ಯಕ್ರಮ ಭಾರತದ ಖ್ಯಾತ ಗಾಯಕರನ್ನು ಒಟ್ಟುಗೂಡಿಸಲಿದ್ದು 10 ಜೀ ಫೇಸ್ ಬುಕ್ ಪುಟಗಳಲ್ಲಿ 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಲೈವ್ ಸ್ಟ್ರೀಮ್ ಮಾಡಲಿದ್ದಾರೆ. ಲಾಕ್ ಡೌನ್ ಟೈಮಲ್ಲಿ ಮ್ಯೂಟ್ ಡೌನ್ ಆಗಿರುವ ನಿಮಗಾಗಿ ನಿಮ್ಮ ನೆಚ್ಚನ ತಾರೆಯರ ಹೊಸ ಪ್ರಯತ್ನ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಸ ರೆ ಗ ಮ ಪ , ಲಾಕ್ ಡೌನ್ ಡೈರೀಸ್ , ಕಾಫಿ ವಿಥ್ ಅನು ನೋಡಿ ಕುಟುಂಬದ ಜೊತೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿ.

Leave a Comment