ಜೀವಾ ಜೊತೆ ಕೊಹ್ಲಿ ತುಂಟಾಟ

ಮುಂಬೈ, ಅ ೯- ಕ್ರಿಕೆಟ್ ಬಿಡುವಿನ ಸಮಯದಲ್ಲಿ ಆಗಾಗ ಕ್ರಿಕೆಟಿಗರ ಮಕ್ಕಳೊಂದಿಗೆ ಕಾಲ ಕಳೆಯುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಎಂ.ಎಸ್. ಧೋನಿ ಅವರ ಪುತ್ರಿ ಜೀವಾಳೊಂದಿಗೆ ಕಳೆದ ತುಂಟಾಟದ ಸಮಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಆಸ್ಟ್ರೇಲಿಯಾ ವಿರುದ್ಧ ಟಿ-೨೦ ಪಂದ್ಯವನ್ನಾಡಲು ರಾಂಚಿಗೆ ಹೋಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಧೋನಿ ಮನೆಗೂ ಹೋಗಿದ್ದರು. ರಿಂಗ್ ರೋಡ್ ನಲ್ಲಿರುವ ಎಂ.ಎಸ್. ಧೋನಿ ಮನೆಗೆ ಹೋಗಿದ್ದ ಕೊಹ್ಲಿ, ಧೋನಿ ಮಗಳು ಜೀವಾ ಜೊತೆ ಕಳೆದ ಸುಂದರ ಕ್ಷಣಗಳನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಮತ್ತೆ ಜೀವಾಳನ್ನು ಭೇಟಿಯಾದೆ. ಮುಗ್ದ ಮಗುವಿನ ಜೊತೆ ಕಳೆದ ಕ್ಷಣ ತುಂಬಾ ಸುಂದರವಾಗಿತ್ತೆಂದು ಕೊಹ್ಲಿ ಹೇಳಿದ್ದಾರೆ. ಇನ್ಸ್ಟ್ರಾಗ್ರಾಮ್‌ನ ತಮ್ಮ ಅಕೌಂಟ್ ನಲ್ಲಿ ಜೀವಾ ಜೊತೆ ಕಳೆದ ಕೆಲ ಕ್ಷಣಗಳ ವಿಡಿಯೋವನ್ನೂ ಕೊಹ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಹುಲ್ಲು ಹಾಸಿನ ಮೇಲೆ ಜೀವಾ ಜೊತೆ ಕುಳಿತ ಕೊಹ್ಲಿ ಯಾರು ಮಾಡಿದ್ದು ಎಂದು ಕೇಳ್ತಾರೆ. ಜೀವಾ ಕೂಡ ಇದೇ ಪ್ರಶ್ನೆಯನ್ನು ಕೊಹ್ಲಿಗೆ ಕೇಳ್ತಾಳೆ. ನಂತರ ಬೆಕ್ಕು ಎನ್ನುವ ಜೀವಾ ಬೆಕ್ಕಿನ ರೀತಿಯಲ್ಲಿ ಕೂಗ್ತಾಳೆ. ಜೀವಾಳಂತೆ ಮಾಡುವ ಕೊಹ್ಲಿ ಕೂಡ ಬೆಕ್ಕಿನಂತೆ ಕೂಗ್ತಾರೆ.

ಈ ವಿಡಿಯೋ ನೋಡಿದವರು ಕೊಹ್ಲಿ ತಮ್ಮ ಆಕರ್ಷಕ ಬ್ಯಾಟಿಂಗ್ ಮತ್ತು ಲುಕ್ ನಿಂದ ಅನೇಕ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಕೊಹ್ಲಿ ಮಾತ್ರ ಧೋನಿ ಮಗಳು ಜೀವಾ ಅವರ ದೊಡ್ಡ ಫ್ಯಾನ್ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ.

ಈ ಟ್ಟೀಟ್‌ಗೆ ೬೧,೦೦೦ ಲೈಕ್, ೧೧,೦೦೦ ರೀ-ಟ್ವೀಟ್‌ಗಳು ಬಂದಿದ್ದೆ. ಇತ್ತೀಚೆಗೆ ಬಾಲಿವುಡ್ ನಟ ಅನುಪಮ್ ಖೇರ್, ಧೋನಿ ಹಾಗೂ ಅವರ ತಂದೆ ಜೊತೆಗಿರುವ ಫೋಟೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು. ಜೀವಾ ಬಗ್ಗೆಯೂ ಹೇಳಿದ್ದ ಅನುಪಮ್ ಖೇರ್, ಜೀವಾ ತುಂಬಾ ಸುಂದರವಾಗಿ ರಾಷ್ಟ್ರಗೀತೆ ಹಾಗೂ ಇತರ ಹಾಡುಗಳನ್ನು ಹಾಡ್ತಾಳೆ ಎಂದು ಬರೆದಿದ್ದರು.

 

Leave a Comment