ಜೀವಾಹಿನಿಯಲ್ಲಿ ಹಲವು ಬದಲಾವಣೆಯೊಂದಿಗೆ ಹೊಸ ಕಂತುಗಳ ಪ್ರಸಾರ

ಲಾಕ್ ಡೌನ್ ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಧಾರವಾಹಿಗಳ ಹೊಸ ಕಂತುಗಳ ಪ್ರಸಾರ ನೋಡಲು ಸಾಧ‍್ಯವಾಗದೇ ಬೇಸರದಲ್ಲಿದ್ದ ವೀಕ್ಷಕರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಹೌದು ಈಗಾಗಲೇ ನಿಮಗೆ ತಿಳಿದಿರುವಂತೆ ಧಾರಾವಾಹಿಗಳ ಚಿತ್ರೀಕರಣ ಪ್ರಾರಂಭವಾಗಿದ್ದು, ಮನೆಯಲ್ಲಿ ಹಳೆಯ ಎಫಿಸೋಡ್‌ ನೋಡಿ ಬೇಸತ್ತ ಹೆಂಗಳೆಯರು ಹೊಸ ಕಂತುಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾಗಿ ನಿಮ್ಮೆ ನೆಚ್ಚಿನ ಧಾರಾವಹಿಗಳು ಬರುವ ಸೋಮವಾರದಿಂದ ಕೆಲ ಬದಲಾವಣೆಗಳಿಂದ ಮೂಡಿಬರಲಿದೆ.

ಜೀ ಕನ್ನಡ ಕರ್ನಾಟಕದಲ್ಲಿ ಯಶಸ್ವಿಯಾಗಿ 14 ವರ್ಷಗಳನ್ನು ಪೂರೈಸಿದೆ. “ಬಯಸಿದ ಬಾಗಿಲು ತೆಗೆಯೋಣ” ಎಂಬ ಟ್ಯಾಗ್ ಲೈನ್ ಮೂಲಕ ವಿಶ್ವದಾದ್ಯಂತ ಕನ್ನಡಿಗರ ಮನೆ ಮನೆಗೆ ತಲುಪಿದ  ಸಮಗ್ರ ಮನರಂಜನೆಯ ಕನ್ನಡ ವಾಹಿನಿಯಾಗಿದೆ.ಕನ್ನಡದ ಮುಂಚೂಣಿಯ ಮನರಂಜನೆಯ ವಾಹಿನಿ ಜೀ಼ ಕನ್ನಡದಲ್ಲಿ ಜನಪ್ರಿಯ ಧಾರಾವಾಹಿಗಳು ಜೂನ್ 1ರಿಂದ ಮತ್ತೆ ಪ್ರಾರಂಭವಾಗಲಿವೆ. ರಾಜ್ಯ ಸರ್ಕಾರವು ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ ಕಾಪಾಡಿಕೊಂಡು ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರಿಂದ ಧಾರಾವಾಹಿಗಳ ಚಿತ್ರೀಕರಣ ಮತ್ತೆ ಪ್ರಾರಂಭಗೊಂಡಿದ್ದು ಜೂನ್ 1ರಿಂದ ವೀಕ್ಷಕರು ತಮ್ಮ ನೆಚ್ಚಿನ ಧಾರಾವಾಹಿಗಳನ್ನು ವೀಕ್ಷಿಸಬಹುದಾಗಿದೆ. ಜೂನ್ 1ರಿಂದ ಪ್ರಸಾರವಾಗಲಿರುವ ಧಾರಾವಾಹಿಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ರಾಧಾ ಕಲ್ಯಾಣ ಮತ್ತು ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಗಳ ಪ್ರಸಾರ ಇರುವುದಿಲ್ಲ. ಉಳಿದ ಧಾರಾವಾಹಿಗಳ ಪ್ರಸಾರ ಸಮಯ ಕೂಡ ಬದಲಾಗಿವೆ.

ಸಂಜೆ 6.30ಕ್ಕೆ ಮಾಲ್ಗುಡಿ ಡೇಸ್, 7.00 ಗಂಟೆಗೆ ಕಮಲಿ, ಪಾರು ರಾತ್ರಿ 7.30ಕ್ಕೆ, ರಾತ್ರಿ 8.00ಕ್ಕೆ ಗಟ್ಟಿಮೇಳ, 8.30 ಜೊತೆ ಜೊತೆಯಲಿ, ರಾತ್ರಿ 9.00ಕ್ಕೆ ನಾಗಿಣಿ-2, ರಾತ್ರಿ 9.30ಕ್ಕೆ ಯಾರೇ ನೀ ಮೋಹಿನಿ ಹಾಗೂ ರಾತ್ರಿ 10.00 ಗಂಟೆಗೆ ಬ್ರಹ್ಮಗಂಟು ಧಾರಾವಾಹಿಗಳು ಪ್ರಸಾರವಾಗಲಿವೆ. ಲಾಕ್ ಡೌನ್ ಏಕತಾನತೆಯಿಂದ ಬೇಸರಗೊಂಡಿದ್ದ ವೀಕ್ಷಕರಿಗೆ ಅವರ ನೆಚ್ಚಿನ ಧಾರಾವಾಹಿಗಳ ಮರು ಪ್ರಾರಂಭದೊಂದಿಗೆ ಜೀ಼ ಕನ್ನಡ ಮನರಂಜನೆಯ ಮಹಾಪೂರಕ್ಕೆ ಚಾಲನೆ ನೀಡಿದೆ.

d

ಮೋಕ್ಷಿತಾ ಸಂತಸ
ಪಾರು ಧಾರಾವಾಹಿ ಮೂಲಕ ಮನೆಮಾತಾಗಿರುವ ಮೋಕ್ಷಿತಾ ಪೈ ಕೂಡ ಸುದೀರ್ಘ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಇದ್ದು ಇದ್ದು ಬೋರಾಗಿತ್ತು. ಇದೀಗ ಮತ್ತೆ ತುಂಬಾ ದಿನಗಳ ನಂತರ ಚಿತ್ರೀಕರಣ ಶುರುವಾಗಿರುವುದು ನಿಜಕ್ಕೂ ಸಂತಸ ತಂದಿದೆ. ಇನ್ನು ಮತ್ತೆ ವಿನಯ ಪ್ರಸಾದ್‌ ಅಮ್ಮ ಹಾಗೂ ಸಹ ಕಲಾವಿದರನ್ನು ಭೇಟಿ ಮಾಡಿದ್ದು ಖಷಿ ತಂದಿದೆ. ಚಟುವಟಿಕೆಗಳಿಲ್ಲದೇ ಕೈಕಟ್ಟಿ ಕುಳಿದಿದ್ದ ನಮಗೆ ಮತ್ತೆ ಕೆಲಸ ಮಾಡಲು ಉಮ್ಮಸ್ಸು ಹೆಚ್ಚಾಗಿದೆ ಎಂದು ಕೊರೊನಾ ಲಾಕ್‌ಡೌನ್‌ ಬಳಿಕದ ಮೊದಲ ದಿನದ ಶೂಟಿಂಗ್‌ ಬಗ್ಗೆ ಹೇಳಿಕೊಂಡರು.

ಅರ್ಧಕ್ಕೆ ಸ್ಥಗಿತಗೊಳ್ಳಲಿದೆ ಕೆಲ ಧಾರಾವಾಹಿ
ಉದಯ ವಾಹಿನಿ, ಕಲರ್ಸ್ ವಾಹಿನಿ ತನ್ನ ಹಲವಾರು ಧಾರವಾಹಿಗಳನ್ನು ಅರ್ಧಕ್ಕೇ ನಿಲ್ಲಿಸುವ ಬಗ್ಗೆ ಈಗಾಗಲೇ ಪ್ರಕಟಣೆ ನೀಡಿತ್ತು. ಇದೀಗ ಜೀ ಕನ್ನಡ ವಾಹಿನಿಯೂ ಪ್ರತಿನಿತ್ಯ 6 ಗಂಟೆಗೆ ಪ್ರಸಾರವಾಗುತ್ತಿದ್ದ ‘ಸುಬ್ಬಲಕ್ಷ್ಮಿ ಸಂಸಾರ’ ಧಾರವಾಹಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಧಾರವಾಹಿಯಲ್ಲಿ ಇನ್ನೂ ಒಳ್ಳೆಯ ಕ್ಲೈಮ್ಯಾಕ್ಸ್ ಇತ್ತು. ಆದರೆ ಲಾಕ್ ಡೌನ್ ನಿಂದಾಗಿ ಅದನ್ನು ಪೂರ್ಣ ಮಾಡಲಾಗುತ್ತಿಲ್ಲ ಎನ್ನಲಾಗಿದೆ. ಸ್ವಪ್ನ ಕೃಷ್ಣ ಈ ಧಾರವಾಹಿಯನ್ನು ನಿರ್ಮಾಣ ಮಾಡುತ್ತಿದ್ದರು.

Share

Leave a Comment