ಜೀವವಿಮಾ ಸೌಲಭ್ಯ ಕುರಿತು ಉಪನ್ಯಾಸ

ಧಾರವಾಡ ಫೆ.17- ಕರ್ನಾಟಕ ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಕವಿವಿ ದತ್ತು ಗ್ರಾಮ ಮನಸೂರಿನಲ್ಲಿ ಜೀವ ವಿಮಾ ಯೋಜನೆಗಳು ಮತ್ತು ಸೇವೆಗಳು ವಿಷಯದ ಕುರಿತು ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮನಸೂರ ಗ್ರಾಮದಲ್ಲಿ ವಿಜಯಾ ಬ್ಯಾಂಕ್ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಬ್ಯಾಂಕ ಮ್ಯಾನೇಜರ್ ರಾಜಲಕ್ಷ್ಮೀ ಜೆ. ಮಾತನಾಡಿದರು. ಭಾರತೀಯ ಜೀವ ವಿಮಾ ನಿಗಮದ ಧಾರವಾಡ ಶಾಖಾ ಅಭಿವೃದ್ದಿ ಅಧಿಕಾರಿ ಬಸವರಾಜ್ ಎನ್ ಕೊಣ್ಣೂರ ಉಪನ್ಯಾಸ ನೀಡಿದರು.
ಗ್ರಾಪಂ ಅಧ್ಯಕ್ಷೆ ರುಕ್ಮೀನಿ ನಿಂಗಪ್ಪ ತೇಗೂರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ರಿಯಾಜ್ ಬುಡ್ಡೆಸಾಬ ನಿಪ್ಪಾಣಿ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶಾಂತಾ ಕುಂಬಾರ, ಗ್ರಾಮದ ಹಿರಿಯ ಠಾಣಯ್ಯ ಹಿರೇಮಠ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಚ್. ಎಚ್. ಭರಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯರಾದ ಶಂಕರಪ್ಪ ಕುರುಬರ, ಯಲ್ಲವ್ವ ಕೂಡಲಗಿ, ಕರೆಪ್ಪ ಎತ್ತಿಗುಡ್ಡ ಮಹಾದೇವಿ ಜಾಲಿಕಟ್ಟಿ, ಯಲ್ಲಪ್ಪ ಕೊಟಬಾಗಿ, ಬಸವ್ವ ನೇಕಾರ, ಮಾಜಿ ಗ್ರಾಪಂ ಸದ¸ಸ್ಯ ನಿಂಗಪ್ಪ ತೇಗೂರ ಸೇರಿದಂತೆ ಗ್ರಾಮದ ಹಿರಿಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Comment