ಜೀವಬೆದರಿಕೆ ಹಾಕಿದವರನ್ನು ಬಂಧಿಸಿ:ಸ್ವಾಮೀಜಿ

ಕಲಬುರಗಿ ಅ 12: ಅಫಜಲಪುರ ತಾಲೂಕಿನ ಸಿಧನೂರ ಗ್ರಾಮಕ್ಕೆ ಉಪನ್ಯಾಸ ಕಾರ್ಯಕ್ರಮಕ್ಕೆಂದು ಹೋದಾಗ ನಿಂದನೆ ಮಾಡಿ ಜೀವಬೆದರಿಕೆ ಹಾಕಿದ ಗ್ರಾಮದ ಮೂವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕ್ಕೆ ರೇವೂರು( ಬಿ) ಬೊಮ್ಮಲಿಂಗೇಶ್ವರ ಬೃಹನ್ಮಠದ ಪೀಠಾಧೀಶರಾದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ ಅವರು ಇಂದು ನಗರದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು
ಗ್ರಾಮದ ಹನುಮಾನ ದೇವರ ಜಾತ್ರೆಯಲ್ಲಿ ಉಪನ್ಯಾಸ ನೀಡಲು ಹೋದಾಗ ವೀರಶೈವ ಲಿಂಗಾಯತ ಧರ್ಮವನ್ನು ಕಾಂಗ್ರೆಸ್ ಸರಕಾರÀ ಒಡೆಯಲು ಯತ್ನಿಸುತ್ತಿದೆ. ಈ ಬಗ್ಗೆ ಭಕ್ತರು ಎಚ್ಚರದಿಂದ ಇದ್ದು ಧರ್ಮ ಕಾಪಾಡಬೇಕು ಎಂದು ಪ್ರವಚನದ ನಡುವೆ ಹೇಳಿದ್ದೆ. ಪ್ರವಚನ ಮುಗಿಸಿಕೊಂಡು ಊರಿಗೆ ಹೊರಟಾಗ ಅದೇ ಗ್ರಾಮದ ಮೂವರು ಅಡ್ಡಗಟ್ಟಿ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ ನೀನು ಪ್ರವಚನ ಹೇಳುವದನ್ನು ಬಿಟ್ಟು ಕಾಂಗ್ರೆಸ್ ಸರಕಾರದ ವಿರುದ್ಧ ಮಾತಾಡುತ್ತಿಯಾ. ನಿನ್ನನ್ನು ಜೀವಸಹಿತ ಬಿಡುವದಿಲ್ಲ ಎಂದು ಬೆದರಿಕೆ ಹಾಕಿ ಹೋಗಲು ಬಿಡದೇ ತಡೆಯೊಡ್ಡಿದರು. ಈ ಕುರಿತು ರೇವೂರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ಅಷ್ಟಗಿ,ಶಹಾಪುರ, ಕುರುಗೋಡ ಮಠಾಧೀಶರು, ಸುಭಾಷ ಕಾಂಬಳೆ,ಸಂತೋಷ ಪಾಟೀಲ, ಎಂಎಸ್ ಪಾಟೀಲ ನರಿಬೋಳ, ಗುರು ತೆಂಗಳಿ, ಗಂಗಾಧರ ಸೇರಿದಂತೆ ಹಲವರಿದ್ದರು.

Leave a Comment