ಜೀವನ ೩೬೦

ಹುಡುಗರು ಸೇರಿಕೊಂಡು ಮಾಡಿರುವ ಚಿತ್ರ “ಲೈಫ್ ೩೬೦”. ಅರ್ಜುನ್ ಕಿಶೋರ್ ನಾಯಕನಾಗಿ ನಿರ್ದೇಶನ ಮಾಡಿರುವ ಚಿತ್ರ ಇದಾಗಿದೆ. ಪಾಯಲ್ ಮತ್ತು ಅನುಶಾ ಚಿತ್ರಕ್ಕೆ ನಾಯಕಿಯರು.

ಚಿತ್ರ ಮಾಡುವ ಉದ್ದೇಶದಿಂದ ಸ್ನೇಹಿತರ ಬಳಿ ಹಣ ಸಂಗ್ರಹಣೆ ಮಾಡಿ ಚಿತ್ರ ಮಾಡುತ್ತಿದ್ದ ಅರ್ಜುನ್‌ಗೆ ಹಣಕಾಸಿನ ಸಮಸ್ಯೆ ಎದುರಾದಾಗ ಹೊಸ ಹುಡುಗರ ಕೈ ಹಿಡಿದು ಮುನ್ನೆಡೆಸಿದವರ ನಿರ್ಮಾಪಕ ರಾಜಶೇಖರ್. ಹುಡುಗರು ಚಿತ್ರಕ್ಕೆ ಖರ್ಚು ಮಾಡಿದ ಹಣ ನೀಡಿ ಮುಂದೆ ನಾನಿರುತ್ತೇನೆ ಎಂದು ಅಭಯ ನೀಡಿ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರ ಮುಂದಿನ ತಿಂಗಳು ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ. ನಾಯಕ ಕಮ್ ನಿರ್ದೇಶಕ ಅರ್ಜುನ್ ಮಾತನಾಡಿ, ಕನ್ನಡದ ಮೇಲಿನ ಪ್ರೀತಿಗಾಗಿ ಸಿನಿಮಾ ಮಾಡಲಾಗಿದೆ.

ಕಷ್ಟಕಾಲದಲ್ಲಿ ರಾಜಶೇಖರ್ ಕೈ ಹಿಡಿದಿದ್ದಾರೆ. ರಾಜ್ಯದ ೨೦ ಜಿಲ್ಲೆಗಳಲ್ಲಿ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ರಾಜ್ಯದಲ್ಲಿ ಸುಂದರ ಸ್ಥಳಗಳು ಇಂತವುಗಳೂ ಇವೆಯಾ ಎನ್ನುವ ಅನುಮಾನ ಎಲ್ಲರನ್ನೂ ಕಾಡಿದರೆ ಅಚ್ಚರಿ ಇಲ್ಲ. ಟೀನೇಜ್ ಹುಡುಗರ ಟ್ರಾವಲ್ ಕುರಿತಾದ ಚಿತ್ರ ಇದು, ಜೀವನವನ್ನು ಹೇಗೆ ರೂಪಿಸಕೊಳ್ಳುತ್ತಾನೆ ಎನ್ನುವ ಕಥಾ ಹಂದರವನ್ನು ಚಿತ್ರ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ನಿರ್ಮಾಪಕ ರಾಜಶೇಖರ್,ಹೊಸ ಹುಡುಗರ ಹುಮ್ಮಸ್ಸು ನೋಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದೇನೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು. ನಾಯಕಿ ಅನುಶಾ,ಮತ್ತು ಪಾಯಲ್ ಹೊಸತರದ ಪಾತ್ರವಿದೆ ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎನ್ನುವ ವಿಶ್ವಾಸದ ಮಾತುಗಳನ್ನಾಡಿದರು.

ಛಾಯಾಗ್ರಾಹಕ ಅನಿಲ್, ಸುಂದರ ಸ್ಥಳಗಳಲ್ಲಿ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ.ಚಿಕ್ಕಮಗಳೂರಿನ ಶೀಶೀಲಾ ಬೆಟ್ಟದಲ್ಲಿ ಚಿತ್ರೀಕರಣ ಮಾಡಲಾಗಿದ್ದು ಈ ಮಾದರಿಯ ಪ್ರಕೃತಿ ಸೌಂದರ್ಯವನ್ನು ಯಾರೂ ಇದುವರೆಗೂ ಚಿತ್ರಿಸಿಲ್ಲ ಎಂದು ಹೇಳಿಕೊಂಡರು.

ಸಂಗೀತ ನಿರ್ದೇಶಕ ಜೋಡಿಯಾದ ಮಹಾಂತ್ ನೀಲ್ ಮತ್ತು ಪ್ರಜ್ವಲ್ ಚಿತ್ರದಲ್ಲಿ ೬ ಹಾಡುಗಳಿವೆ.ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿವೆ ಎಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡರು.

ಕಿರುತೆರೆ ಕಲವಿದ ಶ್ರೀನಿವಾಸಗೌಡ,ಹೊಸ ತಂಡವಾದರೂ ಕಲಾವಿದರನ್ನು ತಂಡ ಚೆನ್ನಾಗಿ ನೋಡಿಕೊಂಡಿದೆ ಎಂದು ಮೆಚ್ಚುಗೆಯ ಮಾತನಾಡಿದರು.

Leave a Comment