ಜೀವನ ಸಾರ್ಥಕಗೊಳಿಸಿಕೊಳ್ಳಿ-ಡಾ.ಕರ್ಜಗಿ

ಧಾರವಾಡ,ಏ16- ಭಗವಂತ ನಮಗೆ ಕರುಣಿಸಿದ್ದು ಒಂದೇ ಜೀವನ. ಈ ಜೀವನವನ್ನೇ ನಾವು ಸಾರ್ಥಕಗೊಳಿಸಬೇಕು ಎಂದು ಖ್ಯಾತ ಶಿಕ್ಷಣತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸ್ನೇಹ ಪ್ರಕಾಶನ ಹಾಗೂ ಪ್ರಿಮಿಯರ್ ಸಿಟಿಜನ್ಸ್ ಕ್ಲಬ್ಲ್ ಆಯೋಜಿಸಿದ ‘ವಸಂತ ವ್ಯಾಖ್ಯಾನ’ ಕಾರ್ಯಕ್ರಮದ ಮೂರನೇ ದಿನ ಉಪನ್ಯಾಸ ನೀಡಿದ ಡಾ. ಕರ್ಜಗಿ, ಈ ಬಾಳಲ್ಲಿ ನಂಬಿಕೆ ಇರಬೇಕು, ನಂಬಿಕೆಯ ಜೊತೆಗೆ ಗುರಿ ಇದ್ದಾಗ ಮಾತ್ರ ಬಾಳಿಗೊಂದು ಅರ್ಥ. ಡಿ.ವಿ.ಜಿ ಪ್ರತಿಪಾದಿಸಿದಂತೆ ಬಾಳು ಸಾರ್ಥಕಗೊಳ್ಳಲು ಜೀವನೋತ್ಸಾಹ, ಪುರಷ ಪ್ರಯತ್ನ, ಲೋಕಸ್ನೇಹಿ ಈ ಮೂರು ಗುಣಗಳು ಬಹು ಅವಶ್ಯ.
ಈಗಿನ ಆಧುನಿಕ ಯುಗದಲ್ಲಿ ಜೀವನ ಸಂಭ್ರಮ ನಶಿಸಿದೆ, ಇಂದು ನಾವು ಧೈರ್ಯನಷ್ಟ ಯುಗದಲ್ಲಿ ಅರೆಹೆಣದಂತೆ ಬಾಳುತ್ತಿದ್ದೇವೆ. ಕಷ್ಟ ಎಲ್ಲರ ಜೀವನದಲ್ಲಿ ಇದೆ ಆದರೆ ಅದೇ ಕಷ್ಟ ಜೀವನದಲ್ಲಿ ಬರುವ ಸುಖವನ್ನು ಅನುಭವಿಸದೇ ಬಿಡಬಾರದು. ಬಾಳು ಸದಾ ಉತ್ಸಾಹಭರಿತವಾಗಬೇಕು. ಇದು ವ್ಯರ್ಥದ ಜೀವನವಲ್ಲ. ಇರುವ ಜೀವನವನ್ನ ಗೌರವಿಸಿಬೇಕು. ಏನಾದರೂ ಸಾಧನೆ ಮಾಡಿಯೇ ತೀರಬೇಕು. ಉತ್ಸಾಹದ ಜೊತೆಗೆ ಸತತ ಪ್ರಯತ್ನವು ಅವಶ್ಯ. ಸತತ ಪ್ರಯತ್ನದಿಂದ ಅಸಾಧ್ಯವಾದದನ್ನು ಸಾಧಿಸಬಹುದು ಹಾಗಾಗಿ ಯತ್ನಿಸುವ ಛಲ ಎಂದಿಗೂ ಬಿಡಬಾರದು. ಇರುವ ಅಲ್ಪ ಜೀವನದಲ್ಲಿ ಲೋಕಸ್ನೇಹಿಯಾಗಿ ಬಾಳಬೇಕು. ಯಾರು ಇತರರಿಗೋಸ್ಕರ ಜೀವಿಸುತ್ತಾರೋ ಅವರು ಸದಾ ನೆನಪಿನಲ್ಲಿರುತ್ತಾರೆ. ಮಲ್ಲಿಗೆ ಹೂವಿನ ಆಯಸ್ಸು ಕೇವಲ ಅರ್ಧ ದಿನ. ಆದರೂ ಅದು ಕೊನೆಯವರೆಗೂ ಪರಿಮಳ ನೀಡುತ್ತದೆ. ಹಾಗೆ ನಾವು ಜೀವಿಸುವ ಅವಧಿಯಲ್ಲಿ ಸದಾ ಖುಷಿಯಿಂದ ಬಾಳಬೇಕು ಎಂದು ಹೇಳಿದರು.
ನಂತರ ವಸಂತ ವ್ಯಾಖ್ಯಾನ ಉಪನ್ಯಾಸ ಮಾಲಿಕೆಯ ಸಮಾರೋಪದಲ್ಲಿ ಸ್ನೇಹ ಪ್ರಕಾಶನ ಹಾಗೂ ಪ್ರಿಮಿಯರ್ ಸಿಟಿಜನ್ಸ್ ಕ್ಲಬ್ ವತಿಯಿಂದ ಡಾ.ಗುರುರಾಜ ಕರ್ಜಗಿ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹರ್ಷ ಡಂಬಳ, ವಾಸುದೇವ ಕುಲಕರ್ಣಿ, ಗುರುನಾಥ ಇನಾಮದಾರ, ಬಿ.ಎಸ್.ಖಾವಿ, ಡಾ. ಹನುಮಂತ ಕಾಖಂಡಕಿ, ರಾಧಿಕಾ ಕಾಖಂಡಕಿ ಇತರರು

Leave a Comment