ಜೀವಜಲಕ್ಕಾಗಿ ಜಾಗೃತಿ

ಜೀವಜಲದ ಮಹತ್ವ ಮತ್ತು ಜಾಗೃತಿಗಾಗಿ ಸಂದೇಶ ಸಾರುವ “ಮಾರ್ಚ್-೨೨” ಚಿತ್ರ ಸಂಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ. ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಹರೀಶ್ ಶೇರ್‌ಗಾರ್ ಬಂಡವಾಳ ಹಾಕಿದ್ದಾರೆ. ಇದು ಅವರಿಗೆ ಮೊದಲ ನಿರ್ಮಾಣದ ಚಿತ್ರ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಉದ್ಯಮಿ ಕನ್ನಡಿಗ ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ, ಇನ್ನುಳಿದಂತೆ ಹಿರಿಯ ಕಲಾವಿದರಾದ ರಮೇಶ್ ಭಟ್, ಶರತ್ ಲೋಹಿತಾಶ್ವ, ಪದ್ಮಜಾ ರಾಜ್ ಸೇರಿದಂತೆ ಹಲವು ಕಾಣಿಸಿಕೊಂಡಿದ್ದಾರೆ.

ಅವರೊಂದಿಗೆ ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರು. ಚಿತ್ರ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಮಾಧ್ಯಮದೊಂದಿಗೆ ಮುಖಾಮುಖಿಯಾಗಿತ್ತು.

ಮೊದಲು ನಿರ್ದೇಶ ಕೂಡ್ಲು ರಾಮಕೃಷ್ಣ, ಇದು ನನ್ನ ೨೬ ನೇ ಚಿತ್ರ. ಈ ಚಿತ್ರಕ್ಕೆ ಮೊದಲು ಅನಂತ್‌ನಾಗ್ ಮತ್ತು ಲಕ್ಷ್ಮಿ ಜೋಡಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದ್ದೆ. ಆದರೆ ಕಾರಣಾಂತರದಿಂದ ಲಕ್ಷ್ಮಿ ನಟಿಸಲು ಸಾಧ್ಯವಾಗಲಿಲ್ಲ. ಆ ಜಾಗಕ್ಕೆ ಮತ್ತೊಬ್ಬ ಹಿರಿಯ ನಟಿ ಗೀತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ್ಮಿ ಅವರು ಅನಂತ್‌ನಾಗ್ ಜೊತೆ ಕಾಣಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಚಿತ್ರ ಸಂಪೂರ್ಣಗೊಂಡಿದೆ. ನೀರಿನ ಮಹತ್ವದ ಕುರಿತು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಒಳ್ಳೆಯ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಮಾಪಕ ಹರೀಶ್ ಶೆರಿಗಾರ್, ಚಿತ್ರ ನಿರ್ಮಾಣ ಮಾಡಿರುವುದು ಆಕಸ್ಮಿಕ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ಸಮಾಜಕ್ಕೊಂದು ಸಂದೇಶ ನೀಡುವ ಉದ್ದೇಶದಿಂದ ಚಿತ್ರ ಮಾಡಲಾಗಿದೆ. ಮಾರ್ಚ್-೨೨ ವಿಶ್ವ ಜಲದಿನ. ನೀರಿನ ಬಗೆಗಿನ ಸಿನಿಮಾ ಆಗಿರುವುದರಿಂದ ಚಿತ್ರಕ್ಕೆ ಮಾರ್ಚ್-೨೨ ಎಂದು ಹೆಸರಿಡಲಾಗಿದೆ. ಜಾತಿ ಮತ ಎಂದು ಏನೇನೋ ಕಟ್ಟುಪಾಡುಗಳನ್ನು ಮಾಡಿಕೊಂಡಿದ್ದೇವೆ.  ಮನೆಯಿಂದ ಹೊರಗಡೆ ನಾವೆಲ್ಲಾ ಒಂದೇ. ಚಿತ್ರವನ್ನು ಜೂನ್ ತಿಂಗಳಲ್ಲಿ ತೆರೆಗೆ ತರುವ ಉದ್ದೇಶವಿದೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.

ಉದ್ಯಮಿ ಬಿ.ಆರ್ ಶೆಟ್ಟಿ, ಐದು ನಿಮಿಷದ ಹಾಡಿನಲ್ಲಿ ಕಾಣಿಸಿಕೊಳ್ಳಲು ಐದು ದಿನ ಚಿತ್ರೀಕರಣ ಮಾಡಿದ್ದೇನೆ. ನಿಜಕ್ಕೂ ಸವಾಲಿನ ಕೆಲಸ. ಕಲಾವಿದರ ಶ್ರಮಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಕಂಠೀರಚ ಸ್ಟುಡಿಯೋದಲ್ಲಿ ಸಮಸ್ಯೆಯಾಯಿತು. ಸರ್ಕಾರ ಜಾಗ ನೀಡಿದರೆ ತಾವೇ ಸಟುಡಿಯೋ ನಿರ್ಮಾಣ ಮಾಡುವುದಾಗಿ ಹೇಳಿಕೊಂಡರು.

ಹಿರಿಯ ನಟ ರಮೇಶ್ ಭಟ್ ಅವರಿಗೆ ಈ ಚಿತ್ರ ೫೦೦ನೇ ಚಿತ್ರ. ಮಹತ್ವದ ಸಂದೇಶ ಸಾರುವ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ ಎಂದರೆ ಶರತ್ ಲೋಹಿತಾಶ್ವ, ಪುಡಾರಿಯ ಪಾತ್ರ, ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು ಎಂದು ವಿವರ ನೀಡಿದರು. ಪದ್ಮಜಾ ರಾವ್, ಚಿತ್ರದ ಪ್ರತಿಯೊಬ್ಬರೂ ಒಂದೊಂದು ಪತ್ರಿಕಾಗೋಷ್ಠಿ ನಡೆಸಬೇಕು ಅಷ್ಟರ ಮಟ್ಟಿಗೆ ವಿಷಯ ಇದೆ ಎಂದರು.

ನಟ ಆರ್ಯವರ್ಧನ್, ಹಿರಿಯ ಕಲಾವಿದರು ಚಿತ್ರದಲ್ಲಿ ನಟಿಸಿರುವುದರಿಂದ ಕಿರಿಯರಿಗೆಲ್ಲಾ ಸ್ಫರ್ತಿ ಬಂದಿದೆ. ಇದು ನಮಗೆ ಪಾಠಶಾಲೆ ಇದ್ದಂತೆ ಎಂದು ಹೇಳಿಕೊಂಡರು.

Leave a Comment