ಜೀರಿಗೆಯಲ್ಲಿದೆ ದೇಹ ತೂಕ ಕಡಿಮೆ ಮಾಡುವ ಸಾಮರ್ಥ್ಯ

ಜೀರಿಗೆ ಅತ್ಯಂತ ಸುಲಭವಾಗಿ ಲಭಿಸುವ ಸಾಂಬಾರ ಪದಾರ್ಥ. ಇದು ಆಯುರ್ವೇದದಲ್ಲೂ ಬಳಕೆಯಲ್ಲಿದೆ. ಹಲವಾರು ಉದರ ಸಂಬಂಧಿ ಸಮಸ್ಯೆಗಳಿಗೆ ಇದನ್ನು ಬಳಸುತ್ತಾರೆ. ಮಲಬದ್ಧತೆ, ಮುಖದ ಕಾಂತಿ ಹೆಚ್ಚಿಸುವ, ಶೀತ, ಕೆಮ್ಮು, ಅಸ್ತಮಾದಂತಹ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದರಲ್ಲಿದೆ. ಜೀರಿಗೆಯನ್ನು ಬಳಸುವುದರಿಂದ ಏನೆಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂಬುದನ್ನು ಈಗ ನೋಡೋಣ.

ಜೀರಿಗೆಯನ್ನು ಹುರಿದು ಪುಡಿ ಮಾಡಿ. ಇದರ ಒಂದು ಚಮಚ ಪುಡಿಗೆ ಅರ್ಧ ಚಮದ ಜೇನುತುಪ್ಪ ಸೇರಿಸಿ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

19-aa

ಅರಿಶಿನದ ಪುಡಿಗೆ, ಜೀರಿಗೆ ಪುಡಿ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಪ್ಯಾಕ್ ಹಾಕಿ ೩೦ ನಿಮಿಷ ಬಿಟ್ಟು ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.

ಶೀತ, ಅಸ್ತಮಾ ಇದ್ದರೆ ಒಂದು ಚಮಚ ಜೀರಿಗೆ ಮತ್ತು ೧ ಚಮಚ ಹೆಚ್ಚಿದ ಹಸಿ ಶುಂಠಿಯನ್ನು ೨ ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ. ಸ್ವಲ್ಪ ಸ್ವಲ್ಪವಾಗಿ ಈ ಕಷಾಯವನ್ನು ಕುಡಿದರೆ ಶೀತ , ಕೆಮ್ಮು ಕಡಿಮೆಯಾಗಿ ಅಸ್ತಮಾ ನಿವಾರಣೆಯಾಗುತ್ತದೆ.

ಎರಡು ಚಮಚ ಜೀರಿಗೆಯನ್ನು ರಾತ್ರಿ ನೀರಲ್ಲಿ ನೆನೆಸಿ ಮರುದಿನ ಬೆಳಗ್ಗೆ ಅದನ್ನು ಚೆನ್ನಾಗಿ ಕುದಿಸಿ ಸೋಸಿದ ಮೆಲೆ ಅದಕ್ಕೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಖಾಲಿ ಹೊಟ್ಟೆಗೆ ಸೇವಿಸಿದರೆ ತೂಕ ಬೇಗ ಕಡಿಮೆಯಾಗುತ್ತದೆ.

ಹಣ್ಣಾದ ಬಾಳೆಹಣ್ಣಿಗೆ ಜೀರಿಗೆ ಪುಡಿ ಬೆರೆಸಿ ಮಲಗುವ ಮುಂಚೆ ಸೇವಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆ.

ಶರೀರದ ಉಷ್ಣತೆ ಹೆಚ್ಚಾಗಿ ತುರಿಕೆ ಇದ್ದರೆ, ಜೀರಿಗೆ ಕಷಾಯ ಮಾಡಿ ಸ್ನಾನದ ಕೊನೆಯಲ್ಲಿ ಈ ಕಷಾಯದಿಂದ ಸ್ನಾನ ಮಾಡಿದರೆ ದೇಹ ತಂಪಾಗುತ್ತದೆ ಮತ್ತು ತುರಿಕೆ ಶಮನವಾಗುತ್ತದೆ.

Leave a Comment