ಜೀಪ್ ಲಾರಿ ಡಿಕ್ಕಿ:ಜೀಪ್ ಚಾಲಕ ಸಾವು

ವಿಜಯಪುರ ಮಾ 20: ಜೀಪ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಜೀಪ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಸವನ ಬಾಗೇವಾಡಿ ತಾಲೂಕಿನ ಕೂಡಗಿ ಕ್ರಾಸ್ ಬಳಿ ಸಂಭವಿಸಿದೆ.
ಮೃತಪಟ್ಟ ಜೀಪ್ ಚಾಲಕನನ್ನು ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ಸಂತೋಷ ಕಾತರಕಿ ( 40) ಎಂದು ಗುರುತಿಸಲಾಗಿದೆ.
ಲಾರಿ ವಿಜಯಪುರ ಕಡೆಗೆ ಜೀಪು ಮುತ್ತಗಿಯ ಕಡೆಗೆ ಹೊರಟಿದ್ದವು. ಕೊಲ್ಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ

Leave a Comment