ಜೀಪ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಬೈಕ್ ಸವಾರ ಸಾವು

 

ಕಲಬುರಗಿ,ಜೂ.19-ಕ್ರೂಸರ್ ಜೀಪ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಕಂದಗೋಳ ಗ್ರಾಮದ ಮನೋಹರ ಮೃತಪಟ್ಟ ಬೈಕ್ ಸವಾರ. ನಗರದ ಎ.ಬಿ.ಪಾಟೀಲ ಅಷ್ಠಗ ಅವರ ಅಡತಿಯಲ್ಲಿ ಮುನಿಮಾಗಿ ಕೆಲಸ ಮಾಡುತ್ತಿದ್ದ ಮನೋಹರ ಹೆಂಡತಿಗೆ ಹೆರಿಗೆಯಾಗಿ ಹೆಣ್ಣು ಮಗುವಾದ ವಿಷಯ ತಿಳಿದು ವಾಡಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ. ವಾಡಿಯಿಂದ ರಾವೂರ ಕಡೆಗೆ ಹೋಗುತ್ತಿದ್ದಾಗ ವಾಡಿ ಪಟ್ಟಣದ ಎಸಿಸಿ ನ್ಯಾ ಪ್ಲಾಂಟ್ ಮುಂದಿನ ರಸ್ತೆಯಲ್ಲಿ  ಕ್ರೂಸರ್ ಜೀಪ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ. ಅಂಬ್ಯುಲೆನ್ಸ್ ಹಾಕಿಕೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Comment