ಜೀಪಿಚ್ಚರ್‌ನಲ್ಲಿ ಹೊಚ್ಚ ಹೊಸ ಚಿತ್ರಗಳ ಪ್ರಸಾರ

 

ಬೆಂಗಳೂರು, ಮಾ 20- ರಾಜ್ಯದಲ್ಲಿ ಈಗಾಗಲೇ ಕೊರೋನಾ ಸೊಂಕು ಭೀತಿಯಿಂದ ಜನರು ಗೃಹಬಂಧನವಾಗಲು ಯೋಚಿಸುತ್ತಿದ್ದಾರೆ. ಆದರೆ ಮನೆಯಲ್ಲಿ ಕಾಲಕಳೆಯಲು ಪರಿತಪಿಸುವ ಪ್ರೇಕ್ಷಕರಿಗಾಗಿ ಜೀಪಿಚ್ಚರ್ ಇದೀಗ ೧೨ ಹೊಚ್ಚ ಹೊಸ ಸಿನಿಮಾಗಳನ್ನು ಪ್ರಸಾರ ಮಾಡುವ ಮೂಲಕ ಮನರಂಜಿಸಲು ಸಿದ್ಧವಾಗಿದೆ.

ಕನ್ನಡದ ಜನಪ್ರಿಯ ಚಲನಚಿತ್ರಗಳಿಗೆ ಖ್ಯಾತಿ ಪಡೆದಿರೋ ಜೀ ಪಿಚ್ಚರ್, ೩೫೦ಕ್ಕೂ ಹೆಚ್ಚು ಸಿನಿಮಾಗಳ ಸಂಗ್ರಹ ಹೊಂದಿದೆ. ಮೊದಲ ತಿಂಗಳು ೧೨ ದಿನಗಳಲ್ಲೇ ೧೨ ಸಿನಿಮಾಗಳನ್ನೂ ಪ್ರೀಮಿಯರ್ ಮಾಡುವ ಮೂಲಕ, ಜೀ ಪಿಚ್ಚರ್ ಮನೆಯಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದೆ. ಈಗಾಗಲೇ ಹೊಸ ಚಿತ್ರಗಳ ಹೂರಣ ಶುರುವಾಗಿದ್ದು, ಮಾ ೨೫ರವೆಗೂ ಪ್ರಸಾರವಾಗಲಿದೆ.

ಈ ಹೊಸ ಸಿನಿಮಾ ಚಾನಲ್ ತನ್ನ ಲಾಂಚ್‌ನಲ್ಲಿ, ತನ್ನ ಬ್ರ್ಯಾಡಿಂಗ್ ಒಂದು ಟ್ಯಾಗ್ ಲೈನ್ ಅನ್ನೋ ಪ್ರಚಾರಕ್ಕಾಗಿ ಬಳಿಸಿಕೊಂಡಿದೆ. ಅದುವೆ ‘ಹಿಟ್ ದಿನದ ಫೀಲಿಂಗ್. ಈ ಹಿಟ್ ಅನುಭವವನ್ನು ನೀಡುವ ವಿಶಿಷ್ಟ ಬ್ರಾಂಡ್ ಫಿಲ್ಮಂಗಳನ್ನೂ ಕೂಡ ಈ ಚಾನಲ್‌ನಲ್ಲಿ ರಿಲೀಸ್ ಮಾಡಿದೆ. ಜಾಲಿ ಬಾರು ಮತ್ತು ಪೋಲಿ ಹುಡುಗರು, ಒಂದ್ ಕಥೆ ಹೇಳ್ಲಾ, ಕಾಳಿದಾಸ ಕನ್ನಡ ಮೇಷ್ಟ್ರು, ಎಲ್ಲಿದ್ದೆ ಇಲ್ಲಿತನಕ ಸೇರಿದಂತೆ ಹೊಸ ಚಿತ್ರಗಳ ಪ್ರಸಾರವಾಗಲಿದೆ.

ಯುಗಾದಿ ಹಬ್ಬದವರೆಗೂ ಜನರು ಮನೆಯಲ್ಲಿ ಕಾಲಕಳೆಯಲು ಪರದಾಡುತ್ತಿರುವವರಿಗೆ ಜೀಪಿಚ್ಚರ್ ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿದೆ.

Leave a Comment