ಜಿಲ್ಲೆಯ ಸಮಗ್ರಾಭಿವೃದ್ಧಿಗೆ ಪಟ್ಟಿ ತಯಾರಿ

ರಾಯಚೂರು.ಏ.16- ಜಿಲ್ಲೆಯ ಸಮಗ್ರಾಭಿವೃದ್ಧಿಗಾಗಿ ಯೋಜನೆ ರೂಪಿಸಿದ್ದು, ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಪಟ್ಟಿಯನ್ನು ನೀಡಲಾಗಿದೆಂದು ಹೈದ್ರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಸಮಗ್ರಾಭಿವೃದ್ಧಿಗೆ ಕೆಲ ಅಂಶಗಳನ್ನು ಸಮಿತಿಯಿಂದ ಪಟ್ಟಿ ಮಾಡಲಾಗಿದ್ದು, 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅವುಗಳಿಗೆ ಒತ್ತು ನೀಡುವುದರಿಂದ ಜಿಲ್ಲೆಯ ಪ್ರಗತಿಗೆ ಸಹಕಾರಿಯಾಗುತ್ತದೆ. ರಾಯಚೂರಿನಿಂದ ಮಾನ್ವಿ ಮೂಲಕ ಸಿಂಧನೂರಿಗೆ ರೈಲ್ವೆ ಮಾರ್ಗದ ನಿರ್ಮಾಣ ಕಾರ್ಯ ಪ್ರಾರಂಭಿಸಬೇಕು.
ರಾಯಚೂರು, ಲಿಂಗಸೂಗೂರು, ಬಾಗಲಕೋಟೆ, ಬೆಳಗಾವಿ ಹೊಸ ರೈಲ್ವೆ ಮಾರ್ಗದ ಸರ್ವೆ ಕಾರ್ಯಕ್ಕೆ ಚಾಲನೆ ನೀಡಬೇಕು. ನಾಂದೇಡ್-ಬೆಂಗಳೂರು ರೈಲ್ವೆಯನ್ನು ಪೂರ್ಣ ಪ್ರಮಾಣ ಹಾಗೂ ರಾಯಚೂರು-ಗುಂತಕಲ್ ಪ್ಯಾಸೆಂಜರ್‌ನ್ನು ಬೆಂಗಳೂರಿನವರೆಗೆ ವಿಸ್ತರಿಸಬೇಕು. ಜಿಲ್ಲೆಯಲ್ಲಿ ಕಾಟನ್ ಪಾರ್ಕ್ ಪ್ರಾರಂಭಿಸಬೇಕು. ಇನ್ನಿತರ ಜಿಲ್ಲೆಯ ಅಭಿವೃದ್ಧಿ ಕುರಿತು ಕೆಲ ಅಂಶಗಳನ್ನು ಪಟ್ಟಿ ಮಾಡಿ ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕೆಂದು ತಿಳಿಸಲಾಗಿದೆಂದರು.
ಈ ಸಂದರ್ಭದಲ್ಲಿ ತಿಮ್ಮಾಗುರು, ವಿಜಯ ಮಹಾಂತೇಶ ಉಪಸ್ಥಿತರಿದ್ದರು.

Leave a Comment