ಜಿಲ್ಲೆಯ ಅತ್ಯುತ್ತಮ ಮಹಿಳಾ ಸಂಘ ಪ್ರಶಸ್ತಿ

ಸಂಜೆವಾಣಿ. ಕುರುಗೋಡು (ಎ), ಅ.11: ಸಮೀಪದ ಆರ್.ಕೊಂಡಯ್ಯಕ್ಯಾಂಪ್ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ರಾಬಕೊ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ, 2017-18ನೇ ಸಾಲಿನಲ್ಲಿ ಜಿಲ್ಲೆಯ ಅತ್ಯುತ್ತಮ ಮಹಿಳಾ ಸಂಘ ಎನ್ನುವ ಪ್ರಶಸ್ತಿಗೆ ಭಾಜನವಾಗಿದೆ.

ಸಂಘವನ್ನು 20012ರಲ್ಲಿ ಸ್ಥಾಪಿಸಲಾಯಿತು. ಒಟ್ಟು 141 ಮಹಿಳಾ ಸದಸ್ಯರಿದ್ದಾರೆ. ಈ ಸಂಘ ಆರಂಭದಿಂದಲೂ ಹಾಲು ಉತ್ಪದಾನೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಸಂಘದ 43 ಜನ ಮಹಿಳಾ ಸದಸ್ಯರು ದಿನಾಲು ಬೆಳಗ್ಗೆ, ಸಂಜೆ ಸೇರಿ ನೂರಾರು ಲೀಟರ್ ಹಾಲನ್ನು ಒಕ್ಕೂಟಕ್ಕೆ ರವಾನೆ ಮಾಡುತ್ತಾರೆ.

ವಿಶೇಷ;- ಸಂಘದ ಬಹುತೇಕ ಸದಸ್ಯೆಯರು ಕೃಷಿ ಕೂಲಿ ಕಾರ್ಮಿಕರಾಗಿದ್ದು, ಹೈನುಗಾರಿಕೆ ಮೂಲಕ ಒಂದಷ್ಟು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ರಾಸುಗಳಿಗೆ ಹಸಿ ಮೇವಿಗಾಗಿ ಜಮೀನನ್ನು ಗುತ್ತಿಗೆ ಪಡೆದು, ಹಸಿ ಮೇವು ಬೆಳೆಸಿ ಹೈನುಗಾರಿಕೆ ಕೈಗೊಂಡಿದ್ದಾರೆ. ಅಲ್ಲದೆ

ಇದೀಗ ಹೆಚ್ಚಿನ ಪ್ರಮಾಣದ ಹಾಲು ಉತ್ಪಾದನೆಯಲ್ಲಿ ನಿರತವಾಗಿದೆ.

ಗುಣಮಟ್ಟ;- ಜಿಲ್ಲೆಯಲ್ಲಿನ ಮಹಿಳಾ ಸಂಘಗಳಲ್ಲಿ ಹೆಚ್ಚು ಹಾಲು ಉತ್ಪಾದನೆ ಜತೆಗೆ ಉತ್ತಮ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಪೂರೈಕೆ ಮಾಡುತ್ತಿದೆ. ಸದಸ್ಯರಿಗೆ ಪ್ರತಿ ವರ್ಷ ಬೋನಸ್ ವಿತರಿಸುತ್ತಿದ್ದಾರೆ. 2007-08ರಲ್ಲಿ ಒಕ್ಕೂಟದಿಂದ ಬೀಜಧನ(ಮಾರ್ಜಿನ್ ಮನಿ) 70,000ರೂ ಪಡೆದು, ಇದನ್ನು ಸದಸ್ಯರಿಗೆ ಆಕಳು ಖರೀದಿಗೆ ನೀಡಿ ಪ್ರೋತ್ಸಾಹಿಸಿದೆ. ಒಕ್ಕೂಟದ ಅಮೃತ ಯೋಜನೆ ಸೇರಿದಂತೆ ನಾನಾ ಸವಲತ್ತುಗಳನ್ನು ಬಳಸಿಕೊಂಡು ಹೈನುಗಾರಿಕೆಯನ್ನು ಉತ್ತೇಜಿಸಿದೆ. ಒಕ್ಕೂಟದ ಉಪ ವ್ಯವಸ್ಥಾಪಕ, ಸಮಾಲೋಚಕ ರಾಮಚಂದ್ರ ಮಾರ್ಗದರ್ಶನದಲ್ಲಿ ಸಂಘ ಮುನ್ನಡೆದಿದೆ. ಸಂಘ 2016-17ನೇ ಸಾಲಿನಲ್ಲಿ 1,73,542ರೂ ನಿವ್ವಳ ಲಾಭಗಳಿಸಿದೆ. ಸಂಘದ ಅಧ್ಯಕ್ಷೆ ಕೆ.ಪುಲ್ಲಮ್ಮ, ಉಪಾಧ್ಯಕ್ಷೆ ಜಿ.ಸುಭದ್ರಮ್ಮ, ಕಾರ್ಯದರ್ಶಿ ಎಂ.ವಿಜಯ ಸೇರಿದಂತೆ ಮಂಡಳಿಯವರು ಮತ್ತು ಸಿಬ್ಬಂದಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಲ್ಲರ ಪರಿಶ್ರಮದಿಂದ ಜಿಲ್ಲೆಯಲ್ಲಿ ಅತ್ಯುತ್ತಮ

ಮಹಿಳಾ ಸಂಘ ಎನ್ನುವ ಪ್ರಶಸ್ತಿ ಪಡೆದಿದೆ.

ಈ ಸಂಘದ ಬಗ್ಗೆ ರಾಬೋಕೋ ಒಕ್ಕೂಟದ ಉಪ ವ್ಯವಸ್ಥಾಪಕ ಜೆ.ಕೆ.ಎರ್ರಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಹಾಲು ಶೇಖರಣೆ, ಆಡಳಿತ ಮಂಡಳಿ ಸಕ್ರಿಯ ಪಾಲ್ಗೊಳ್ಳುವಿಕೆ. ಅಲ್ಲದೆ ಒಕ್ಕೂಟ ಯೋಜನೆಗಳನ್ನು ಸರ್ಮಪಕ ಅನುಷ್ಠಾನಗೊಳಿಸುವಿಕೆಯಿಂದ ಈ ಮಹಿಳಾ ಸಂಘ 2017-18ರಲ್ಲಿ ಅತ್ಯುತ್ತಮ ಮಹಿಳಾ ಸಂಘ ಪ್ರಶಸ್ತಿ ಪಡೆದಿದೆ ಎಂದರು.

Leave a Comment