ಜಿಲ್ಲೆಯಲ್ಲಿ ಮುಂದುವರೆದ ಸೂರ್ಯನ ಪ್ರತಾಪ

ಕಲಬುರಗಿ, ಏ.21: ರಾಜ್ಯದಲ್ಲಿಯೆ ಅತೀ ಹೆಚ್ಚಿನ ಸೂರ್ಯನ ಪ್ರತಾಪ ಜಿಲ್ಲೆಯಲ್ಲಿ ಮುಂದುವರೆದ್ದು, ಗುರುವಾರ 43.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಹಾಗೂ 26.9 ಕನಿಷ್ಠ ತಾಪಮಾನ ದಾಖಲಾಗಿದ್ದು, ಕಳೆದ ವರ್ಷ ಗರಿಷ್ಠದಲ್ಲಿ2.7 ಹಾಗೂ ಕನಿಷ್ಠ ತಾಪಮಾನದಲ್ಲಿ 1.9 ಹೆಚ್ಚಳವಾಗಿದೆ.
ಉತ್ತರ ಕರ್ನಾಟಕ ಒಳನಾಡು ಜಿಲ್ಲೆಗಳಾಗದ ವಿಜಯಪುರದಲ್ಲಿ 42.0 ಕನಿಷ್ಠ 24.8 ದಾಖಲಾಗಿದ್ದು ಕಳೆದ ವರ್ಷಕ್ಕಿಂತ 3.0 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ. ಕೊಪ್ಪಳದಲ್ಲಿ ತಾಪಮಾನದಲ್ಲಿ ಗರಿಷ್ಠ 41.5 ಕನಿಷ್ಠ 24.5, ರಾಯಚೂರದಲ್ಲಿ ಗರಿಷ್ಠ 45.1 ಕನಿಷ್ಠ 28.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ 1.5 ಡಿಗ್ರಿ ಸೆಲ್ಸಿಯಸ ಅಧಿಕವಾಗಿದೆ. ಧಾರವಾಡದಲ್ಲಿ ಗರಿಷ್ಠ 39, ಕನಿಷ್ಠ 21.8. ಬೆಳಗಾವ ವಿಮಾನ ನಿಲ್ದಾಣದಲ್ಲಿ ಗರೀಷ್ಠ 38.9 ಕನಿಷ್ಟ 19.8, ಬೆಳಗಾವಿ ನಗರದಲ್ಲಿ ಗರಿಷ್ಠ 37.3, ಕನಿಷ್ಠ 21.2, ಹಾವೇರಿಯಲ್ಲಿ ಗರಿಷ್ಠ 38.2 ಕನಿಷ್ಠ 23.2, ಗದಗದಲ್ಲಿ ಗರಿಷ್ಠ 39.6 ಕನಿಷ್ಟ 23.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

Leave a Comment