ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ

ಮೈಸೂರು. ಜು. 1ಕ್ಕೆ ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ಸುದಿಲೋಕ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಈ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡಿದೆ.
ವಿಜಯವಾಣಿಯ ಉಪ ಸಂಪಾದಕ ಗುರುಪ್ರಸಾದ್ ತುಂಬಸೋಗೆ ವರ್ಷದ ವರದಿಗಾರ, ಟೈಮ್ಸ್ ಆಫ್ ಇಂಡಿಯಾದ ಎಸ್.ಆರ್. ಮಧುಸೂದನ್ ವರ್ಷದ ಛಾಯಾಗ್ರಾಹಕ ಪ್ರಶಸ್ತಿ, ದೃಶ್ಯ ಮಾಧ್ಯಮ ವಿಭಾಗದಲ್ಲಿ ಉತ್ತಮ ವರದಿಗಾರಿಕೆ ಮತ್ತು ದೃಶ್ಯಾವಳಿಗೆ ಪಬ್ಲಿಕ್ ಟಿವಿಯ ಕೆ.ಪಿ.ನಾಗರಾಜ್, ಛಾಯಾಗ್ರಾಹಕ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಜೀವನಮಾನ ಸಾಧನೆಗೆ ಸಂಯುಕ್ತ ಕರ್ನಾಟಕದ ಉಪ ಸಂಪಾದಕ ಎಂ.ಟಿ. ಮಹದೇವ್, ಸಂಪಾದಕೀಯ ವಿಭಾಗ ವರ್ಷದ ಸಾಧನೆಗೆ ಯಶ್ ಟೆಲ್ ಟಿವಿಯ ಪ್ರಧಾನ ಸಂಪಾದಕಿ ಬಿ.ವೈ. ಸಾಹಿತ್ಯ, ವರ್ಷದ ಗ್ರಾಮಾಂತರ ಪತ್ರಕರ್ತ ಆಂದೋಲನ ದಿನಪತ್ರಿಕೆ ಎಂ.ನಾರಾಯಣ, ಪ್ರಜಾವಾಣಿಯ ಛಾಯಾಗ್ರಾಹಕಿ ಬಿ.ಆರ್.ಸವಿತಾ ವರ್ಷದ ಛಾಯಾಗ್ರಾಹಕಿ, ದೃಶ್ಯ ಮಾಧ್ಯಮದ ವರ್ಷದ ಹಿರಿಯ ವರದಿಗಾರ ಪತ್ರಕರ್ತ ಸೋಮಶೇಖರ ಚಿಕ್ಕಮರಳಿ, ದೂರದರ್ಶನ ವಾಹಿನಿಯ ರಾಮು ವರ್ಷದ ಹಿರಿಯ ಛಾಯಾ ಗ್ರಾಹಕ ಪ್ರಶಸ್ತಿ ಆಯ್ಕೆ ಮಾಡಲಾಗಿದೆ.
ಜುಲೈ 1 ರಂದು ಮಾನಸ ಗಂಗೋತ್ರಿಯ ವಿಜ್ಷಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಸಚಿವ ಸಾ.ರಾ.ಮಹೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪದ್ಮರಾಜ ದಂಡಾಲ್, ಶಾಸಕ ಎಲ್. ನಾಗೇಂದ್ರ ಭಾಗವಹಿಸಲಿದ್ದು, ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು ತಿಳಿಸಿದ್ದಾರೆ.

Leave a Comment