ಜಿಲ್ಲಾ ನ್ಯಾಯವಾದಿಗಳ ಸಂಘದಿಂದ  ಮರಿಬಸವನಗೌಡರವರಿಗೆ ಶ್ರದ್ಧಾಂಜಲಿ ಸಭೆ

ರಾಯಚೂರು.ಮೇ.15- ಮುತ್ಸದಿ, ದೀನ ದಲಿತರ ಬಂಧು ಹಾಗೂ ಹಿರಿಯ ನ್ಯಾಯವಾದಿಗಳಾದ ಎಂ.ಮರಿಬಸವನಗೌಡ ಅವರ ನಿಧನಕ್ಕೆ ಜಿಲ್ಲಾ ನ್ಯಾಯವಾದಿಗಳ ಸಂಘದಿಂದ ಸಂತಾಪ ಸಭೆ ಆಯೋಜಿಸಲಾಗಿತ್ತು. ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಸಭೆ ಮರಿಬಸವನಗೌಡರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎಲ್ಲಾ ನ್ಯಾಯವಾದಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಬಾನುರಾಜ್ ಅವರು ಮಾತನಾಡಿ ಎಂ.ಮರಿಬಸವನಗೌಡರವರ ಸೇವೆ ಮತ್ತು ಅನುಭವವನ್ನು ಸ್ಮರಿಸಿದರು. ಅನೇಕ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಮರಿಬಸವನಗೌಡರವರನ್ನು ಸ್ಮರಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶರಣಪ್ಪಗೌಡ ಹೆಂಬೆರಾಳ ವಕೀಲರು, ಅಯ್ಯನಗೌಡ ಗೊಲದಿನ್ನಿ, ಗಿರಿರಾಜ ವಕೀಲರು, ಬಸವರಾಜಗೌಡ ಕೊಪ್ಪರ, ಜೆ.ಚಂದ್ರಶೇಖರ ಪಾಟೀಲ್, ಯು.ಲಿಂಗಾರೆಡ್ಡಿ, ಅಶೋಕ ಬಿ.ಕರೇಕಲ್, ಅಶೋಕ ಕಲ್ಲೂರು, ಶಿವಕುಮಾರ ನಾಯಕ, ಸುರೇಶ ಬಾಬು, ಹುಸೇನ ನಾಯಕ, ಡಿ.ತಿಮ್ಮನಗೌಡ, ರವಿಜೋಶಿ, ಹನುಮಂತ ಮೇಟಿ, ನರೇಂದ್ರ, ಅರುಣಕುಮಾರ, ಅಯ್ಯನಗೌಡ ಮಸೀದಿಪೂರು, ಮಹಾಂತೇಶ ಪಿಜಿ, ಹನುಮರೆಡ್ಡಿ ಗಣೇದಿನ್ನಿ ಉಪಸ್ಥಿತರಿದ್ದರು.

Leave a Comment