ಜಿಲ್ಲಾ ಕಾರಾಗೃಹ : ಮಾನಸಿಕ ಶಿಬಿರ

ರಾಯಚೂರು.ಫೆ.19- ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ಕುರಿತು ಮನುರೋಗ ತಜ್ಞರಾದ ಮನೋಹರ್ ಪತ್ತಾರ್ ಕಾರಾಗ್ರಹ ಸಿಬ್ಬಂದಿ ವರ್ಗಕ್ಕಾಗಿ ಒಂದು ದಿನದ ಶಿಬಿರ ಆಯೋಜಿಸಲಾಗಿತ್ತು.
ಮಾನಸಿಕ ಸಾಮಾರ್ಥ್ಯಕ್ಕೆ ಕಾಯಕಲ್ಪ ಶಿಬಿರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಕರ್ತವ್ಯದಲ್ಲಿ ಮಾನಸಿಕ ಸ್ಥೈರ್ಯ ಕಾಪಾಡಿಕೊಂಡು ಉತ್ತರ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಭವಿಷ್ಯತ್ ರೂಪಿಸಲು ಜೀವನ ಶೈಲಿ ಬದಲಿಸಿಕೊಳ್ಳಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಧೀಕ್ಷಕ ಅಂದಾನಿ, ಉಪ ಅಧೀಕ್ಷಕ ಅಬ್ದುಲ್ ಷುಕೂರು ಶಾಮ್ ಬಿದರಿ, ವಿಶ್ವನಾಥ್ ರೆಡ್ಡಿ, ವೀರಪ್ಪ ನಾಯಕ ಉಪಸ್ಥಿತರಿದ್ದರು.

Leave a Comment