ಜಿಲ್ಲಾ ಕಸಾಪ: ಜ.19 ದತ್ತಿ ಪ್ರಶಸ್ತಿ ಪುಸ್ತಕ ಲೋಕಾರ್ಪಣೆ

ರಾಯಚೂರು.ಜ.17- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ದತ್ತಿ ಪ್ರಶಸ್ತಿ ಪ್ರದಾನ ಹಾಗೂ “ದಡ ಸೇರಿಸು ತಂದೆ” ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ದಿ. 19 ರಂದು ಬೆಳಿಗ್ಗೆ 10.30 ಕ್ಕೆ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಖ್ಯಾತ ಕಾದಂಬರಿಕಾರರಾದ ಮೈಸೂರಿನ ಶ್ರೀಮತಿ ವಸುಮತಿ ಉಡುಪ ಅವರಿಗೆ ಈ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯನ್ನು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಯನ್ನು ಪ್ರಾಧ್ಯಾಪಕರಾದ ಡಾ.ಶೀಲಾದಾಸ್ ಅವರು ನಡೆಸಿಕೊಡಲಿದ್ದಾರೆ. ಡಾ.ಅಮರೇಶ ನುಗಡೋಣಿಯವರ ದಡ ಸೇರಿಸು ತಂದೆ ಎನ್ನುವ ಪುಸ್ತಕ ಲೋಕಾರ್ಪಣೆ ಮಾಡಲಾಗುತ್ತದೆ. ಪುಸ್ತಕ ಬಿಡುಗಡೆಯನ್ನು ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಾ.ಬಿ.ರಮೇಶ, ಪುಸ್ತಕ ಪರಿಚಯವನ್ನು ಪತ್ರಕರ್ತೆ ಶ್ರೀದೇವಿ ಕಳಸದ ಅವರು ಮಾಡಲಿದ್ದಾರೆ.
ಹಂಪಿ ವಿವಿಯ ಪ್ರಾಧ್ಯಾಪಕರು ಡಾ.ಅಮರೇಶ ನುಗಡೋಣಿ ಹಾಗೂ ಮುಖ್ಯಾತಿಥಿಗಳಾಗಿ ಕನ್ನಡ ಪರಿಷತ್ತಿನ ಜಿಲ್ಲಾ ಮಾಜಿ ಅಧ್ಯಕ್ಷರಾದ ಎಸ್.ಶರಣೇಗೌಡ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ವಹಿಸಿಲಿದ್ದಾರೆ.
ಈ ಸಂದರ್ಭದಲ್ಲಿ ಕಸಾಪ ಕಾರ್ಯದರ್ಶಿಗಳಾದ ಭೀಮನಗೌಡ ಇಟಗಿ, ಜ.ಎಲ್.ಈರಣ್ಣರವರು ಉಪಸ್ಥಿತರಿದ್ದರು.

Leave a Comment