ಜಿಲ್ಲಾವಾರು ಪಿ.ಯು ಮೌಲ್ಯಮಾಪನಕ್ಕೆ ಡಾ. ಕುಬೇರಪ್ಪ ಆಗ್ರಹ

ಧಾರವಾಡಮೇ.25 -ಪದವಿಪೂರ್ವ ಶಿಕ್ಷಣ ಇಲಾಖೆಯವರು ಕೇಂದ್ರೀಯ ಮೌಲ್ಯಮಾಪನ ಮಾಡಲು ನಿರ್ಧರಿಸಿರುವ ಪ್ರಸ್ತುತ ಸಂಧರ್ಭದಲ್ಲಿ ಇದು ಅತ್ಯoತ ಅವೈಜ್ಞಾನಿಕ ಮತ್ತು ಅನಾನುಕೂಲಕರವಾಗಿದ್ದು ಪಿ. ಯು ಶಿಕ್ಷಕರು ಇಲ್ಲಿ ಮೌಲ್ಯಮಾಪನ ಮಾಡಲು ಯಾವುದೇ ಕಾರಣಕ್ಕೂಸಾಧ್ಯವೇ ಇಲ್ಲದ ಕಾರಣ, ತಕ್ಷಣ ಮೌಲ್ಯಮಾಪನದ ಕೇಂದ್ರೀಯ ವ್ಯಾಪ್ತಿಯನ್ನುಬದಲಾಯಿಸಿ ಜಿಲ್ಲಾವಾರು ಮೌಲ್ಯಮಾಪನಕ್ಕೆವ್ಯವಸ್ಥೆ ಮಾಡಲು ಪಿ. ಯು ಪರೀಕ್ಷಾ ಮಂಡಳಿ ಕ್ರಮ ಕೈಗೊಳ್ಳಬೇಕೆಂದು ಕೆ. ಪಿ. ಸಿ.ಸಿ ಶಿಕ್ಷಕರು ಹಾಗೂ ಪದವಿಧರರ  ರಾಜ್ಯಾಧ್ಯಕ್ಷರಾದ ಡಾ.  ಕುಬೇರಪ್ಪ ಸರ್ಕಾರಕ್ಕೆ ಆಗ್ರಹಪಡಿಸಿದ್ದಾರೆ.
ಶಿಕ್ಷಣಸಚಿವರು ಮತ್ತು ಪದವಿಪೂರ್ವ ಮುಖ್ಯಸ್ಥರಿಗೆ ವಿವರವಾಗಿ ಪತ್ರ ಬರೆದಿರುವ ಡಾ. ಕುಬೇರಪ್ಪನವರು ಬೆಳಗಾಂ, ಮೈಸೂರು, ಮಂಗಳೂರು, ಬೆಂಗಳೂರು ಈ ಎಲ್ಲಾ ಸ್ಥಳಗಳು ಈಗ ರೆಡ್ಝೋನ್ವ್ಯಾಪ್ತಿಯಲ್ಲಿ ಬರುವುದರಿಂದ ಈ ಸ್ಥಳಗಳಲ್ಲಿ ಶಿಕ್ಷಕರಿಗೆ ವಸತಿ ಮತ್ತು ಊಟದ ಸೌಲಭ್ಯವಿರುವುದಿಲ್ಲ ಸುರಕ್ಷತೆ ವ್ಯವಸ್ಥೆ ಇರುವುದಿಲ್ಲ.ಆದ್ದರಿಂದ ಅದು ಹೇಗೆ ಶಿಕ್ಷಕರು ಮೌಲ್ಯಮಾಪನಕ್ಕೆ ಹಾಜರಾಗಲು ಸಾಧ್ಯವಾಗುತ್ತದೆ ಎಂಬುದನ್ನು ಸರ್ಕಾರ ಮತ್ತು ಪದವಿಪೂರ್ವ ಇಲಾಖೆಯ ಅಧಿಕಾರಿಗಳು ಕಿಂಚಿತ್ತೂ ಯೋಚನೆ ಮಾಡದಿರುವುದು ಅತ್ಯಂತ ದುರ್ದೈವದ ಸಂಗತಿ.
ಕೊರೊನಾ ಪ್ರಕರಣ ಪ್ರಾರಂಭವಾದಾಗಿನಿಂದ ಸರ್ಕಾರ ಶಿಕ್ಷಕರನ್ನ ಅತ್ಯಂತ ಹೀನಾಯವಾಗಿ ನಡೆಸಿಕೊಂಡು ಬಂದಿರುವುದು ಮತ್ತು ಶಿಕ್ಷಕರ ಸಮಸ್ಯೆಗಳ ಬಗ್ಗೆ ದಿವ್ಯನಿರ್ಲಕ್ಷ್ಯ ತಾಳಿರುವುದು ನಮಗೆಲ್ಲ ಅತೀವ ನೋವುಉಂಟುಮಾಡಿದೆ. ಶಿಕ್ಷಕರನ್ನು ನಿರ್ಲಕ್ಷ್ಯ ಮಾಡಿರುವ ಸರ್ಕಾರಗಳು ಬಹಳ ದಿವಸ ಬದುಕುಳಿದಿಲ್ಲ ಎಂಬ ಇತಿಹಾಸ ನೆನಪಿಸಿಕೊಂಡು ಸರ್ಕಾರ ಈಕೂಡಲೇ ಕ್ರಮತೆಗೆದುಕೊಂಡು ಜಿಲ್ಲಾವಾರು ಮೌಲ್ಯಮಾಪನ  ಕೇಂದ್ರವನ್ನು ಸ್ಥಾಪಿಸಿದಲ್ಲಿ ಆಯಾಜಿಲ್ಲೆಯ ಉಪನ್ಯಾಸಕರು ತಮ್ಮ ವಾಹನಗಳಲ್ಲಾದರೂ ಸಂಚರಿಸಿ ಪ್ರತಿದಿವಸ ಮೌಲ್ಯಮಾಪನ ಮುಗಿದ ಮೇಲೆ ಅವರ ಮನೆಗಳನ್ನುಸೇರಬಹುದು, ಶಿಕ್ಷಕರಿಗೆ ಊಟ ಮತ್ತು ವಸತಿ  ಇಲ್ಲದ ಕಡೆ ಮೌಲ್ಯಮಾಪನ ನಡೆಸಿದರೆ, ಶಿಕ್ಷಕರು ಹಾಜರಿರಲು ಹೇಗೆ ಸಾಧ್ಯ. ಆದ್ದರಿಂದ ಸರ್ಕಾರ ನಮ್ಮ ಈ ಬೇಡಿಕೆಯನ್ನು ಸರಿ ಪಡಿಸುವವರೆಗೆ ಎಲ್ಲಾ ಪಿ. ಯು ಉಪನ್ಯಾಸಕರು ಈ ಕೇಂದ್ರೀಯ ಮೌಲ್ಯಮಾಪನವನ್ನು ಬಹಿಷ್ಕರಿಸಬೇಕೆಂದು ಡಾ. ಕುಬೇರಪ್ಪ ಕರೆ ನೀಡಿದ್ದಾರೆ.

Share

Leave a Comment