ಜಿಲೇಬಿ ಹಂಚಿದ ಪೂಜಾ

ಮಳೆ ಹುಡುಗಿ ಪೂಜಾಗಾಂಧಿ ಜಿಲೇಬಿ ಹಂಚಲು ಹೊರಟಿದ್ದಾರೆ.ಪ್ರೇಕ್ಷಕ ಜಿಲೇಬಿ ಕೊಂಡು  ತಿಂದು ಓಕೆ ಅಂದರೆ ಪೂಜಾಗಾಂಧಿ ಮುಂದೆ ಜಿಲೇಬಿ ಎನ್ನುವ ಹೆಸರು ಪಡೆಯಲಿದ್ದಾರೆ ಇದನ್ನು ಆಕೆಯೆ ಹೇಳಿಕೊಂಡಿದ್ದಾರೆ.!

ಜಿಲೇಬಿ ಚಿತ್ರದ ನಾಯಕಿಯಾಗಿ ನಟಿಸಿರುವುದಕ್ಕೆ ನನಗೆ ಜಿಲೇಬಿ ಎನ್ನುವ ಹೆಸರು ಅಂಟಿಕೊಂಡಿದೆ ೯೦ ಹಾಗೂ ಸಿಗರೇಟ್ ಸಿನಿಮಾದಲ್ಲಿ ಹಾಸ್ಯವನ್ನು ಉಣಬಡಿಸಿ ಪ್ರೇಕ್ಷಕರ ನಗಿಸಿದ್ದ ನಿರ್ದೇಶಕ ಲಕ್ಕಿಶಂಕರ್ ಜಿಲೇಬಿ ಮಾಡಿದ್ದು ಇದರಲ್ಲಿ ಪಕ್ಕಾ ಮನರಂಜನೆ ಇದೆ ನೋಡಿ ಖುಷಿಪಡಿ ಎನ್ನುತ್ತಿದ್ದಾರೆ.

ಇಲ್ಲಿಯವರೆಗೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದ ನಾನು ಕೆಲ ದಿನಗಳ ನಂತರ ಸಿಂಪಲ್, ಬೋಲ್ಡ್ ಆಗಿ ಹೆಚ್ಚು ಡೈಲಾಗ್ ಹೇಳದೆ ಜಿಲೇಬಿಯಲ್ಲಿ ನಟಿಸಿದ್ದೇನೆ ಇದು ಪ್ರೇಕ್ಷಕರಿಗೆ ಮಜಾ ಕೊಡಲಿದೆ ಎಂದರು ಪೂಜಾ.

ಕಳೆದ ಸೋಮವಾರ ಜಿಲೇಬಿ ಮಾಡಿರುವುದರ ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಲಕ್ಕಿಶಂಕರ್ ಸ್ನೇಹಿತರ ಜೊತೆಗೆ ಗೋವಾಗೆ ಪ್ರಯಾಣ ಕೈಗೊಂಡಿದ್ದಾಗ, ಅಲ್ಲಿ ನಡೆದ ಘಟನೆಯ ಏಳೆಯನ್ನು ತೆಗೆದುಕೊಂಡು ಅದಕ್ಕೆ  ಜಿಲೇಬಿಗೆ ಹಾರರ್  ಸ್ಪರ್ಶ ನೀಡಿ ಮನರಂಜಾನ್ಮಕ ಸಿನೆಮಾ ಮಾಡಲಾಗಿದೆ ಎನ್ನುತ್ತಾರೆ.

೪೮ ಘಂಟೆಯಲ್ಲಿ ನಡೆಯುವ ಕತೆಯಲ್ಲಿ ಮೂವರು ಹುಡುಗರು ಒಂದು ಮನೆ ಒಳಗೆ ಇರುವಾಗ ಅಲ್ಲಿಗೆ ಒಬ್ಬಳು ಬರುತ್ತಾರೆ. ಅವಳು ಏತಕ್ಕೆ ಬಂದಳು, ಅದರಿಂದ ಏನೇನು ಅವಾಂತರಗಳು ನಡೆಯುತ್ತವೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದಂತೆ. ಸಂಪೂರ್ಣ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂದು ವಿವರ ನೀಡಿದರು.

ಪಬ್‌ನಲ್ಲಿ ವ್ಯವಸ್ಥಾಪಕನಾಗಿ ಚಿಕ್ಕ ವಯಸ್ಸಿಗೆ ಚಪಲವನ್ನು ತೀರಿಸಿಕೊಳ್ಳುವ ಪಾತ್ರದಲ್ಲಿ ಯಶಸ್‌ಸೂರ್ಯ, ಇವರೊಂದಿಗೆ ವಿಜಯ್‌ಚೆಂಡೂರ್, ನಾಗೇಂದ್ರ ನಟನೆ ಇದೆ. ಮೂರು ಹಾಡಿಗೆ  ಜೇಮ್ಸ್ ಸಂಗೀತ ಸಂಯೋಜಿಸಿದ್ದಾರೆ.

ಕತೆ ತೆರೆದುಕೊಳ್ಳುವುದು ಕ್ಲೈಮಾಕ್ಸ್‌ನಲ್ಲಿ. ಅದಕ್ಕೆ ಭಾಗ-೨ ದುಬೈ ಮತ್ತು ೩  ಇಂಗ್ಲೇಡ್‌ನಲ್ಲಿ ನಡೆಯಲಿರುವುದರಿಂದ ಅಲ್ಲಿಯೇ ಚಿತ್ರೀಕರಿಸಲು ಯೋಚನೆ ಮಾಡುತ್ತಿದ್ದಾರೆ. ತಾರಬಳಗದಲ್ಲಿ ಸುಧಾಕರ್, ಸಾಧುಕೋಕಿಲ ನಟನೆ ಇದೆ. ಶಿವುಕಬ್ಬಿನ್ ನಿರ್ಮಾಣ ಮಾಡಿರುವ ಸಿನಿಮಾವು ಸದ್ಯದಲ್ಲೆ ತೆರೆಗೆ ಬರಲಿದೆ.

Leave a Comment