ಜಿಲೇಬಿ ಮತ್ತು ವಯಸ್ಕರು

ವಯಸ್ಕರ ಕಥಾವಸ್ತು ಇರುವುದರಿಂದ ‘ಜಿಲೇಬಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ‘ಎ’ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಚಿತ್ರಕ್ಕೆ ಒಂದು ಕಟ್ ಕೂಡ ಹೇಳಿಲ್ಲ ಎಂದಷ್ಟೇ ನಿರ್ದೇಶಕ ಲಕ್ಕಿ ಶಂಕರ್ ಹೇಳಿದರು. ಅಪ್ಪಿ ತಪ್ಪಿಯೂ ಮಕ್ಕಳು ಮತ್ತು ಕುಟುಂಬದವರು ಒಟ್ಟಿಗೆ ನೋಡಬಹುದಾದ ಚಿತ್ರ ಎಂದು ಹೇಳಿಕೊಳ್ಳಲಿಲ್ಲ. ಮೂವರು ಬ್ರಹ್ಮಚಾರಿಗಳ ಕಥೆ ಇರುವುದರಿಂದ ಬ್ರಹ್ಮಚಾರಿಗಳಾಗಿದ್ದವರೆ ಮುಂದೆ ಸಂಸಾರಿಗಳಾಗುತ್ತಾರಲ್ವಾ? ಎನ್ನುವ ಮೂಲಕ ಕಟುಂಬದವರು ನೋಡಬಹುದೆನ್ನುವುದನ್ನು ಸೂಚ್ಯವಾಗಿ ತಿಳಿಸಿದರು.

ಅದರೆ ಚಿತ್ರದಲ್ಲಿ ಒಬ್ಬ ಬ್ರಹ್ಮಚಾರಿಯಾಗಿ ನಟಿಸಿರುವ ನಾಗೇಂದ್ರ ಈಗ ಕಾಂಡೋಮ್ ಜಾಹೀರಾತುಗಳನ್ನು ಮತ್ತು ಅದರಂತೆಯೇ ಇರುವ ಸುಗಂಧದ್ರವ್ಯಗಳ ಜಾಹೀರಾತನ್ನು ಮಕ್ಕಳು ಟಿವಿಯಲ್ಲಿ ನೋಡುತ್ತಿದ್ದಾರೆ. ಹೀಗಿರುವಾಗ ‘ಜಿಲೇಬಿ’ಯನ್ನು ಮಕ್ಕಳು ಮತ್ತು ಇಡೀ ಕುಟುಂಬದವರು ನೋಡಬಹುದು ಎನ್ನುವ ಸಮರ್ಥನೆಗೆ ಇಳಿದರು.  ‘ಜಿಲೇಬಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆದಾಗ ನಾಗೇಂದ್ರ ಅವರ ಮಾತುಗಳಲ್ಲಿ ಸತ್ಯವಿತ್ತೆನ್ನಬಹುದು.

ಆದರೆ ಮಕ್ಕಳು ಯಾವುದನ್ನು ನೋಡಬಹುದು ಅಥವಾ ನೋಡಬಾರದು ಎಂದು ನಿರ್ಧರಿಸುವ ಸರ್ಕಾರಿ ಅಧಿಕಾರ ಇರುವವರು ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಹಾಗೇನೆ ಟಿವಿ ಕಾರ್ಯಕ್ರಮ ಮತ್ತು ಜಾಹೀರಾತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸೆನ್ಸಾರ್ ಮಂಡಳಿ ಆಗಬೇಕೆನ್ನುವ ಕೂಗೂ ಇದೆ. ಈ ವಿಚಾರ ಇಲ್ಲಿ ಅಪ್ರಸ್ತುತ ಆದರೆ ನಾಗೇಂದ್ರ ತಮಗೆ ಗೊತ್ತೆ ಇಲ್ಲದೆ ಮುಕ್ತವಾಗಿ ಈ ನಿಟ್ಟಿನಲ್ಲಿ ಪ್ರಶ್ನೆ ಎತ್ತಿದ್ದಾರೆ.

ಹಾಡೊಂದರಲ್ಲಿ ಅವರು ಪೂಜಾಗಾಂಧಿಯನ್ನು ಎರಡು ಕೈಯಿಂದ ಎತ್ತಿ ತಿರುಗುವುದಿದೆ ಆದರೆ ಪೂಜಾಳ ತೂಕ ಹೊರಲಾಗದೆ ಒದ್ದಾಡಿಕೊಂಡಿದ್ದರ ವಿಡಿಯೋ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಆನಂತರ ಪೂಜಾ ಮುಜಗರವಾಗಿ ತೂಕ ಇಳಿಸಿಕೊಳ್ಳಲು ಜಿಂದಾಲ್‌ಗೆ ಹೋಗಿದ್ದಾಳೆ ಎನ್ನಲಾಗುತ್ತಿದೆ. ಆನಂತರದಿಂದ ಅವಳು ಕಾಣಿಸಿಕೊಂಡಿಲ್ಲ ಈ ಕಾರ್ಯಕ್ರಮಕ್ಕೂ ಬಂದಿರಲಿಲ್ಲ. ಈ ಕಾರಣದಿಂದಾಗಿ ನಾಗೇಂದ್ರ ಪೂಜಾ ಮರಳಿದಾಗ ಮುಂಗಾರು ಮಳೆಯ ಪೂಜಾಗಾಂಧಿ ಆಗಿರುತ್ತಾರೆ ಎಂದು ಆಶಿಸಿದರು.

ಪೂಜಾಗಾಂಧಿ ಇದರಲ್ಲಿ ಕಾಲ್‌ಗರ್ಲ್ ಜಿಲೇಬಿಯ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಕಥೆ ಇಲ್ಲ ಜಿಲೇಬಿಯ ಮತ್ತು ಬ್ರಹ್ಮಚಾರಿಗಳ ನಡೆಯೇ ಸಿನೆಮಾ ಆಗಿದೆ ಎನ್ನುವಂಥ ಕುತೂಹಲ ಹುಟ್ಟಿಸಿರುವ ಶಂಕರ್ ತಮ್ಮ ಹಿಂದಿನ ಚಿತ್ರಗಳಾದ ೯೦ ಮತ್ತು ಸಿಗರೇಟ್ ಚಿತ್ರಗಳಿಗಿಂತ ‘ಜಿಲೇಬಿ’ ತೃಪ್ತಿ ಕೊಟ್ಟಿದೆ ಎನ್ನುತ್ತಾರೆ.

‘ಜಿಲೇಬಿ’ ಚಿತ್ರ ಎಂದಾಕ್ಷಣ ಪೂಜಾಗಾಂಧಿ ನಟಿಸಿರುವುದು ಎನ್ನುವ ಪ್ರತಿಕ್ರಿಯೆ ರಾಜ್ಯದೆಲ್ಲೆಡೆಯಿಂದ ವ್ಯಕ್ತವಾಗುತ್ತಿದೆ ಅಷ್ಟರಮಟ್ಟಿಗೆ ಜನರನ್ನು ಚಿತ್ರ ತಲುಪಿದೆ ಎನ್ನುವ ಸಂತಸ ಅವರಲ್ಲಿ ಇತ್ತು.  ಚಿತ್ರಕ್ಕೆ ಹಾಡೊಂದನ್ನು ರಚಿಸಿರುವ ಅಂಧರಾದ ತಿಪ್ಪೇಸ್ವಾಮಿ ಹಾಡುಗಳ ಸಿಡಿ ಬಿಡುಗಡೆ ಮಾಡಿದ್ದು ಅರ್ಥ ಪೂರ್ಣವಾಗಿತ್ತು. ಅವರು ‘ಜಿಲೇಬಿ’ ಚಿತ್ರ ಬಿಡುಗಡೆಯ ನಂತರವೂ ಎ ಸರ್ಟಿಫಿಕೇಟ್ ಸಿಗಲಿದೆ. ಅದು ‘ಜಿಲೇಬಿ’ ಅಮೇಜಿಂಗ್ ಎನ್ನುವುದಾಗಿರುತ್ತದೆ ಎಂದು ಶುಭಹಾರೈಸಿದ್ದು ನಿಜವಾಗುತ್ತದೆಯೆ? ಕಾದುನೋಡಬೇಕು.

Leave a Comment