ಜಿಮ್ ಬಿಡಿ ವಾಕಿಂಗ್ ಮಾಡಿ

ಉತ್ತಮ ಆರೋಗ್ಯ ಹಾಗೂ ಫಿಟ್ ದೇಹಕ್ಕಾಗಿ ಎಲ್ಲರೂ ಕಸರತ್ತು ಮಾಡ್ತಾರೆ. ಇಂದಿನ ಜೀವನ ಶೈಲಿಯಲ್ಲಿ  ತಮ್ಮನ್ನು ತಾವು ಫಿಟ್ ಇರಿಸಲು ಜಿಮ್ ಮೊರೆ ಹೋಗೋದು ಸಾಮಾನ್ಯ. ಆದ್ರೆ ಜಿಮ್ ಗಿಂತ ವಾಕಿಂಗ್ ಅಥವಾ ರನ್ನಿಂಗ್ ಮಾಡೋದು ಆರೋಗ್ಯಕ್ಕೆ ಉತ್ತಮ.

ವಾರದಲ್ಲಿ ಕನಿಷ್ಠ ಆರು ಗಂಟೆಗಳ ಕಾಲ ಬ್ರಿಸ್ಕ್ ವಾಕ್ ಮಾಡುವವರ ಆರೋಗ್ಯ ಜಿಮ್ ಮಾಡುವವರಿಗಿಂತ ಚೆನ್ನಾಗಿರುತ್ತದೆಯಂತೆ. ಹಾಗಾಗಿ ಜಿಮ್ ಗಿಂತ ವಾಕಿಂಗ್ ಅಥವಾ ಬ್ರಿಸ್ಕ್ ವಾಕ್ ಮಾಡೋದು ಉತ್ತಮ ಅಭ್ಯಾಸ.

ಬೊಜ್ಜು ಅಥವಾ ಅತಿ ತೂಕ ಹೊಂದಿದ್ರೆ ಜಿಮ್‌ಗೆ ಹಣ ಸುರಿದು ಬೆವರು ಹರಿಸಬೇಡಿ. ಹತ್ತಿರವಿರುವ ಪಾರ್ಕ್‌ಗೆ ಹೋಗಿ ಒಂದಿಷ್ಟು ಹೊತ್ತು ವಾಕ್ ಮಾಡಿ. ಸುಲಭವಾಗಿ ಬೊಜ್ಜು ಕರಗೋದ್ರಲ್ಲಿ ಸಂಶಯವಿಲ್ಲ.

ಅಮೆರಿಕಾದ  ಕ್ಯಾನ್ಸರ್ ಸಂಶೋಧನಾ ಸಂಸ್ಥೆಯೊಂದರ ಪ್ರಕಾರ, ಪ್ರತಿದಿನ ವಾಕಿಂಗ್ ಮಾಡುವವರ ಆಯಸ್ಸು ಸಾಮಾನ್ಯದವರಿಗಿಂತ ಹೆಚ್ಚಂತೆ. ಆರೋಗ್ಯ ವೃದ್ಧಿ, ಫಿಟ್ನೆಸ್ ಜೊತೆಗೆ ಆಯಸ್ಸು ವೃದ್ಧಿ ಬಯಸುವವರು ಇಂದಿನಿಂದಲೇ ವಾಕಿಂಗ್ ಶುರು ಮಾಡಿ.

Leave a Comment