ಜಿಮ್ಸ್ ಗುತ್ತಿಗೆಸಿಬ್ಬಂದಿ ಧರಣಿ ವಾಪಸ್

ಕಲಬುರಗಿ ಅ 12: ಗುಲಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು 94 ಜನ ಗುತ್ತಿಗೆ ಆಧಾರಿತ ನರ್ಸಿಂಗ್ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದನ್ನು ವಿರೋಧಿಸಿ ಕಳೆದ 96 ದಿನಗಳಿಂದ ನಡೆಯುತ್ತಿದ್ದ, ಅನಿರ್ದಿಷ್ಟ ಧರಣಿ ಸರದಿ ಉಪವಾಸ ಸತ್ಯಾಗ್ರಹವನ್ನು ಇಂದಿನಿಂದ ತಾತ್ಕಾಲಿಕವಾಗಿ ವಾಪಸ್ಸು ಪಡೆಯಲಾಗಿದೆ.ಕಾರ್ಮಿಕರು ಮತ್ತು ಜಿಮ್ಸ್ ಆಡಳಿತ ಮಂಡಳಿ ನಡುವಿನ ವ್ಯಾಜ್ಯವು ಜಿಲ್ಲಾ ಕಾರ್ಮಿಕ ನ್ಯಾಯಾಲಯದ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು ನ್ಯಾಯಾಲಯದಲ್ಲಿ ಹೈಕ ಶುಶ್ರೂಷಕರ (ನರ್ಸಸ್) ಅಭಿವೃದ್ಧಿ ಸಂಘವು ಕಾನೂನಾತ್ಮಕ ಹೋರಾಟ ನಡೆಸಲಿದೆ  ಎಂದು  ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ರಾಜ್ಯಾಧ್ಯಕ್ಷ  ಆರ್ ಮಾನಸಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ಕಲಬುರಗಿ ಉಪ ಕಾರ್ಮಿಕ ಆಯುಕ್ತರು ಕಾರ್ಮಿಕರು ಮತ್ತು ಜಿಮ್ಸ್ ಆಡಳಿತ ಮಂಡಳಿ ನಡುವೆ ಏರ್ಪಡಿಸಿದ್ದ ಎರಡು ಸುತ್ತಿನ ಸಂಧಾನ ಸಭೆ ವಿಫಲವಾದ ಕಾರಣ, ಕಾರ್ಮಿಕ ಇಲಾಖೆ ಪ್ರಕರಣವನ್ನು ಕಾರ್ಮಿಕ ಇಲಾಖೆಗೆ ವರ್ಗಾಯಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿ ಅಮರೇಶ್,ಸಾಗರ ತೆಗನೂರ,ಸೂರ್ಯಕಾಂತ ಮಹೂಲಕರ್,ಶರಣು ಹಾವನೂರ,ಚನ್ನಮ್ಮ,ಪುನೀತಕುಮಾರ ಸಗರಕರ್ ಉಪಸ್ಥಿತರಿದ್ದರು..

Leave a Comment