ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಕುಡುಕನ ಅವಾಂತರ

 

ಕಲಬುರಗಿ,ಜೂ.29-ಕುಡುಕನೊಬ್ಬ ಕಂಠಮಟ ಕುಡಿದು ಮರವೇರಿ ಮಂಗಾಟ ನಡೆಸಿ ಅವಾಂತರ ಸೃಷ್ಟಿಸಿದ ಘಟನೆ ನಗರದ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.

ಎಣ್ಣೆಹಾಕಿ ಫುಲ್ ಟೈಟಾಗಿದ್ದ ಕುಡುಕನೊಬ್ಬ ಭಾನುವಾರ ಮಧ್ಯಾಹ್ನದ ವೇಳೆ ಆಸ್ಪತ್ರೆಯ ಆವರಣದಲ್ಲಿನ ಮರವೇರಿ ಮರದ ಕೊಂಬೆಯ ಮೇಲೆ ಮಲಗಿಕೊಂಡು ಸತ್ತವರಂತೆ ನಟಿಸುವುದರ ಮೂಲಕ ಅಲ್ಲಿದ್ದ ಜನರನ್ನು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದ.

ಕುಡುಕನ ಈ ಅವಾಂತರ ಕಂಡು ಹೌಹಾರಿದ ಜನ ಮತ್ತು ಆಸ್ಪತ್ರೆಯ ಸಿಬ್ಬಂದಿ ಆತನನ್ನು ಮರದಿಂದ ಕೆಳಗಿಳಿಸಲು ಹರಸಾಹಸಪಟ್ಟರು. ಯಾರ ಮಾತಿಗೂ ಜಗ್ಗದೇ ಇದ್ದುದ್ದರಿಂದ ಕಡೆಗೆ ಪೊಲೀಸರೇ ಸ್ಥಳಕ್ಕೆ ಧಾವಿಸಿ ಕುಡುಕನನ್ನು ಮರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.

ಮರದಿಂದ ಕೆಳಗಿಳದ ಮೇಲೂ ಮದ್ಯದ ಅಮಲಿನಲ್ಲಿಯೇ ತೂರಾಡುತ್ತಿದ್ದ ಕುಡುಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಮದ್ಯದ ಅಮಲಿನಲ್ಲಿದ್ದ ಈ ವ್ಯಕ್ತಿಯಾರು, ಯಾವ ಊರು ಅನ್ನುವುದು ಇನ್ನೂ ಗೊತ್ತಾಗಿಲ್ಲ.

Share

Leave a Comment