ಜಿಪಂ ಮುಂದೆ ಧರಣಿ ನಾಳೆ

ಕಲಬುರಗಿ ಫೆ 28: ಯಡ್ರಾಮಿ ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿಯಲ್ಲಿ 40 ಲಕ್ಷ ರೂ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಉಪಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಇಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು, ಅವ್ಯಹಾರ ತನಿಖೆಗೆ ಆಗ್ರಹಿಸಿ ಜಿಪಂ ಕಚೇರಿ ಮುಂದೆ ನಾಳೆ ( ಫೆ.29) ಯಿಂದ ಅಹೋರಾತ್ರಿ ಧರಣಿ ನಡೆಸಲಾಗುವದು ಎಂದರು

ಅಂಗನವಾಡಿ ಕಟ್ಟಡ ಕಾಮಗಾರಿ ಮತ್ತಿತರ ಉದ್ಧೇಶಕ್ಕೆ ಬಿಡುಗಡೆಯಾದ ಹಣದ ದುರ್ಬಳಕೆ ಯಾಗಿದ್ದು ಪಿಡಿಒ ಮೇಲೆ ಮಾತ್ರ ದೂರು ದಾಖಲಾಗಿದೆ. ಆದರೆ ಸೂಕ್ತ ತನಿಖೆ ನಡೆÉಸಿ ಎಲ್ಲ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ  ಮಲ್ಲಿನಾಥಗೌಡ ಪಾಟೀಲ ಈರಣ್ಣ ನಾಯ್ಕೋಡಿ, ಪ್ರಕಾಶಗೌಡ ಉಪಸ್ಥಿತರಿದ್ದರು.

Leave a Comment