ಜಿಎಂಐಟಿಯಲ್ಲಿ ಪಿರಮಿಡ್‍ನ ಸಮಾರೋಪ

ದಾವಣಗೆರೆ.ಮೇ.16- ನಗರದ ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ “ಪಿರಮಿಡ್” (ಫೋರಂ)ನ ಸಮಾರೋಪ ಹಾಗೂ 8ನೇ ಸೆಮಿಸ್ಟರ್‍ನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಖ್ಯಾತ ಕಿರುತೆರೆ ಕಲಾವಿದ, ರಂಗಕರ್ಮಿ ಮತ್ತು ಜಿಎಂಐಟಿಯ ಕ್ರಿಯೇಟಿವ್ ಕನ್ಸಲ್ಟೆಂಟ್ ಆಗಿರುವ ಆರ್ ಟಿ ಅರುಣ್ ಕುಮಾರ್ ಮಾತನಾಡಿ, ತಮ್ಮ ತಾತನವರ ಕಾಲದಿಂದ ಈಗಿನ ಕಾಲದವರೆಗಿನ ಬೇರೆ ಬೇರೆ ವಾಹನಗಳ ಶಬ್ಧಗಳ ನಕಲು ಮಾಡಿ ರಂಜಿಸಿದರಲ್ಲದೆ, ಹೇಗೆ ಪೀಳಿಗೆಯಿಂದ ಪೀಳಿಗೆಗೆ ವೇಗ ಹೆಚ್ಚುತ್ತಿದೆಯೇ ಹೊರತು, ಮೊಬೈಲ್ ಮತ್ತು ಇತರೆ ವ್ಯಸನಗಳಿಂದಾಗಿ ಮನುಷ್ಯ ತಾನು ಎಲ್ಲಿ ಇದ್ದಾನೋ ಅಲ್ಲಿಯೇ ಉಳಿದಿದ್ದಾನೆ ಎಂದು ಅರ್ಥೈಸಿದರು.
ಶ್ರೀ ಶೈಲ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ ಎಂ ಲಿಂಗರಾಜು ಮಾತನಾಡಿ, ಸಮಾರೋಪ ಎಂದರೆ ಇಲ್ಲಿಗೆ ಎಲ್ಲಾ ಮುಗಿಯಿತು ಎಂದು ಭಾವಿಸದೆ, ಈ ಸಂಸ್ಥೆಯ ಬಾಗಿಲು ನಿಮಗೆ ಸದಾ ತೆರೆದಿರುತ್ತದೆ, ಇನ್ನು ಮುಂದೆ ತಾವೆಲ್ಲರೂ ಉನ್ನತ ಸ್ಥಾನಕ್ಕೆ ಏರಲಿದ್ದೀರಿ,ಆ ಮಾರ್ಗದಲ್ಲಿ ನಿಮಗೆ ಅನೇಕ ವಿಭಿನ್ನ ಅನುಭವಗಳು ಆಗಲಿದೆ, ಆ ಅನುಭವಗಳನ್ನು ಇಲ್ಲಿಗೆ ಬಂದು ನಿಮ್ಮ ಕಿರಿಯ ಗೆಳೆಯರೊಂದಿಗೆ ಹಂಚಿಕೊಳ್ಳುವುದಾಗಿ ಕರೆಕೊಟ್ಟರು.
ಈ ಸಮಾರಂಭದಲಿ ಉಪಪ್ರಾಂಶುಪಾಲರಾದ ಡಾ. ಬಿ ಆರ್ ಶ್ರೀಧರ್ ರವರು ಮಾತನಾಡಿ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಸಾಧಿಸಿದ ಮೈಲಿಗಲ್ಲುಗಳ ಮೆಲುಕು ಹಾಕಿದರು. ಈ ಸಮಾರಂಭದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗು ಫೋರಮ್ ‘ಪಿರಮಿಡ್’ ಅಧ್ಯಕ್ಷರಾದ ಡಾ. ಎಚ್ ಎಸ್ ಗೋವರ್ಧನ ಸ್ವಾಮಿ ರವರು ಮಾತನಾಡಿ, ಎಲ್ಲಾ ಹೊರಹೊಗುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಕೋರಿ, ತಮ್ಮ ಕಿರಿಯ ಗೆಳೆಯರಿಗೆ ಮಾದರಿಯಾಗಲು ಕರೆ ಕೊಟ್ಟರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಸವಿನೆನಪುಗಳನ್ನು ಎಲ್ಲರೊಂದಿಗೆ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದರು. ಕೊನೆಯಲ್ಲಿ 8ನೇ ಸೆಮಿಸ್ಟರ್‍ನ ವಿದ್ಯಾರ್ಥಿಗಳಿಗೆ ಸಿವಿಲ್ ವಿಭಾಗದ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಿ ಬೀಳ್ಕೊಡಲಾಯಿತು.

Leave a Comment