ಜಿಂದಾಲ್‍ಗೆ ಜಮೀನು;ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರತಿಭಟನೆ

ದಾವಣಗೆರೆ.ಜೂ.13; ಜಿಂದಾಲ್ ಕಂಪನಿಗೆ 3667 ಎಕರೆ ಜಮೀನನ್ನು ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ಎಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ಮಾತನಾಡಿ ಜಿಂದಾಲ್ ಕಂಪನಿಗೆ ರಾಜ್ಯ ಸರ್ಕಾರ ಭೂಮಿಯನ್ನು ನೀಡುವಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಖಾಸಗಿ ಕಂಪನಿಗೆ 3667 ಎಕರೆ ಜಾಗವನ್ನು ಕೊಡುವ ಕೆಟ್ಟ ನಿರ್ಣಯವನ್ನು ತೆಗೆದುಕೊಂಡಿರುವುದು ವಿಷಾಧನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಸಂಪತ್ತು ರಕ್ಷಿಸಬೇಕಾದ ರಾಜ್ಯ ಸರ್ಕಾರ ಇಂದು ಖನಿಜ ಸಂಪನ್ಮೂಲವಿರುವ ಇಷ್ಟೊಂದು ದೊಡ್ಡ ಪ್ರಮಾಣದ ಜಮೀನನ್ನು ಪರಭಾರೆ ಮಾಡಲು ಹೊರಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದಂತಿದೆ. ಲಕ್ಷಾಂತರ ರೂ ಬೆಲೆ ಬಾಳುವ ಜಮೀನನ್ನು ಕಡಿಮೆ ಮೊತ್ತಕ್ಕೆ ನಿಗದಿ ಮಾಡಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ಹಣ ನಷ್ಟ ಉಂಟು ಮಾಡಿದೆ. ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ದ ರಾಜ್ಯಾದ್ಯಂತ ಹಲವಾರು ಪ್ರಮುಖರು ವಿರೋಧ ವ್ಯಕ್ತಪಡಿಸಿದರು ಕೂಡ ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡದೆ ಇರುವುದರಿಂದ ರಾಜ್ಯದ ಸಂಪತ್ತನ್ನು ಖಾಸಗಿಯವರಿಗೆ ಪರಭಾರೆ ಮಾಡಿ ಲೂಟಿ ಮಾಡುವ ಯೋಜನೆ ಎಂಬುದು ಜಗತ್ ಜಾಹಿರವಾಗಿದೆ ಎಂದರು. ಇಂದಿನ ಸರ್ಕಾರಗಳು ಗಣಿಗಾರಿಕೆ ಪರವಾನಗಿ ನೀಡಿ ಗುತ್ತಿಗೆ ಕೊಡುವ ಪದ್ದತಿ ಇದ್ದರು ಕೂಡ ಅದನ್ನು ಮೀರಿ ಮಾರಾಟ ಮಾಡಲು ಹೊರಟಿರುವುದು ಖಂಡನೀಯ. ರಾಜ್ಯ ಸರ್ಕಾರ ತಕ್ಷಣ ಈ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ ಮಾಡಿ ರಾಜ್ಯ ಸರ್ಕಾರದ ವಿರುದ್ದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಪಿ.ಸಿ.ಶ್ರೀನಿವಾಸ್, ರಾಜನಹಳ್ಳಿ ಶಿವಕುಮಾರ್, ರಾಜಶೇಖರ್, ಎಲ್.ಡಿ.ಗೋಣೆಪ್ಪ, ಮುಕುಂದಪ್ಪ, ಶಿವನಗೌಡ ಪಾಟೀಲ್, ಉಮೇಶ್ ಪಾಟೀಲ್, ಟಿಂಕರ್ ಮಂಜಣ್ಣ, ರಮೇಶ್ ನಾಯ್ಕ್, ಚೇತನ್ ಶಿವಕುಮಾರ್, ವೀರೇಶ್, ಹಾಲೇಶ್, ಸುರೇಂದ್ರಮೋಯ್ಲಿ, ದೇವಿರಮ್ಮ, ಶಾಂತಮ್ಮ, ಶಂಕರಗೌಡ ಬಿರಾದಾರ್, ರಾಜುನಿಲ್ಗುಂದ, ಚೇತುಬಾಯಿ, ಅಂಜಿನಮ್ಮ, ದ್ರಾಕ್ಷಯಣಮ್ಮ, ಗಾಯತ್ರಿ ಮತ್ತಿತರರಿದ್ದರು.
13dph3

Leave a Comment